ಅಳಂದ:ಹಳ್ಳಿ ಸಂಪರ್ಕರಸ್ತೆ ನಿರ್ಮಿಸಲು ಆಗ್ರಹ

 

ಕಲಬುರಗಿ ಜು 10: ಅಳಂದ ತಾಲೂಕಿನ ಹೆಬಳಿ,ನಿಂಬರಗಿ,ದಂಗಾಪುರ,ಬಟ್ಟರಗಿ,ಅಂಬೇಡಕಿಣಗಿ ಗ್ರಾಮಗಳಿಗೆ ಸಂಪರ್ಕರಸ್ತೆ ನಿರ್ಮಿಸುವಂತೆ ಅಹಿಂದ ಚಿಂತಕರ ವೇದಿಕೆ ಅಧ್ಯಕ್ಷ ಸೈಬಣ್ಣ ಜಮಾದಾರ ಇಂದು ಸುದ್ದಿಗೋಷ್ಠಿಯಲ್ಲಿ   ಆಗ್ರಸಿದರು.ವೇದಿಕೆ ವತಿಯಿಂದ ಕಳೆದ 2 ವರ್ಷಗಳಿಂದ ಈ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸಿ ಮನವಿ ಸಲ್ಲಿಸದರೂ,ಜಿಲ್ಲಾಡಳಿತ ಜನಪ್ರತಿ  ನಿಧಿಗಳು ಸ್ಪಂದಿಸಿಲ್ಲ ಎಂದು ದೂರಿದರು.ಅಳಂದ ಪಟ್ಟಣ,ಖಾನಾಪುರ ,ಜಮಗ ತಾಂಡಾಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು.ಮಂಟಕಿಯಿಂದನೀರಗುಡಿವರೆಗಿನ ರಸ್ತೆಯು ನಿರ್ಮಾಣ ಹಂತದಲ್ಲಿದ್ದು,ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಹಕ್ಕೊತ್ತಾಯ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಜು ಹೊಡಲಕರ್,ತಿಪ್ಪಣ್ಣಾ ಪವಾರ,ಇಸ್ಮಾಯಿಲ್ ಮಾಲಗತ್ತಿ ಉಪಸ್ಥಿತರಿದ್ದರು..

Leave a Comment