ಅಲ್ಪಸಂಖ್ಯಾತ ಪರಿಧಿಯಡಿ ಹಿಂದೂಗಳು?  ಅರ್ಜಿ ತಿರಸ್ಕರಿಸಿದ ಸುಪ್ರೀಂ

ನವದೆಹಲಿ, ಫೆ 20 -ಹಿಂದೂಗಳನ್ನು ಅಲ್ಪಸಂಖ್ಯಾರ ಪರಿಧಿಯಡಿ ತರಬಹುದೇ ಎಂಬ ವಿಷಯದ ಕುರಿತು ಮಾರ್ಗದರ್ಶನ ಕೋರಿ, ಬಿಜೆಪಿ ನಾಯಕ, ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಲಕ್ಷದ್ವೀಪದಲ್ಲಿ  ಶೇ 2.5, ಮಿಜೋರಾಂ –ಶೇ 2.75, ನಾಗಾಲ್ಯಾಂಡ್ ಶೇ 8.75, ಮೇಘಾಲಯ ಶೇ 11.53, ಜಮ್ಮು ಕಾಶ್ಮೀರ ಶೇ 28.44, ಅರುಣಾಚಲ ಪ್ರದೇಶ ಶೇ 29, ಮಣಿಪುರ ಶೇ 31.39 ಮತ್ತು ಪಂಜಾಬ್ ನಲ್ಲಿ ಶೇ 38.40ರಷ್ಟು ಹಿಂದೂಗಳಿರುವ  ಬಗ್ಗೆ  ಅಶ್ವಿನಿ ಕುಮಾರ್ ಉಪಾಧ್ಯಾಯ ದತ್ತಾಂಶ ಸಲ್ಲಿಸಿದ್ದರು.

ಅರ್ಜಿಯಲ್ಲಿ ಯಾವುದೇ ಪರಿಗಣನೀಯ ಅಂಶಗಳಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್‍ ಎ ಬೋಬ್ಡೆ ನೇತೃತ್ವದ ಪೀಠ ತಿಳಿಸಿದ್ದು, ವಿಚಾರಣೆಯನ್ನು ತಳ್ಳಿಹಾಕಿದೆ.  ಆದರೆ ಅರ್ಜಿದಾರರು ದೆಹಲಿ ಹೈಕೋರ್ಟ್ ನಲ್ಲಿ ಪರಿಹಾರ ಪಡೆದುಕೊಳ್ಳಲು ಸ್ವತಂತ್ರರು ಎಂದು ಹೇಳಿದೆ.

Leave a Comment