ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸುವೆ

ಹರಪನಹಳ್ಳಿ.ಜ.12; ಅಲ್ಪಸಂಖ್ಯಾತರ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಶ್ರಮಿಸುತ್ತೇನೆ ಎಂದು ಅಂಜುಮನ್ ಕಮಿಟಿ ನೂತನ ಅಧ್ಯಕ್ಷ ಮುಜಬರ್ ರೆಹಮಾನ್ ಹೇಳಿದರು
ಪಟ್ಟಣದ ನಟರಾಜ್ ಕಲಾ ಭವನದಲ್ಲಿಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಯೋಜನೆಗಳ ಜಾರಿಗೆ ಸಹಕರಿಸುತ್ತೇನೆ. ಮುಸ್ಲಿಂ ಸಮಾಜ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ. ಈ ನಮ್ಮ ಸಮಾಜದ ಏಳಿಗೆಗೆ ಎಲ್ಲರೂ ಕೈಜೋಡಿಸಬೇಕಿದೆ. ರಾಜಕೀಯ ವಿಚಾರ ಬಂದಾಗ ರಾಜಕೀಯ ಮಾಡಬೇಕು. ಸಮಾಜದ ಕೆಲಸ ಕಾರ್ಯಗಳಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕಾಗಿದೆ ಎಂದು ನುಡಿದರು.
ಅಲ್ಪ ಸಂಖ್ಯಾತರ ಮುಖಂಡ ಡಿ.ಎಂ. ವಿನೋಸ್, ಸೋಗಿ ಇಬ್ರಾಹಿಮ್, ನಜೀರ್ ಸಾಬ್, ತಾಲೂಕು ಬಿಜೆಪಿ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಬ್ದುಲ್ ಅಜೀಜ್, ಜಾಫರ್ ಸಾಬ್, ಎಂ.ಕೆ. ರಾಯಲ್ ಸಿದ್ದೀಕ್, ಎಸ್.ಕೆ. ಜಾವೀದ್, ಎಂ.ಡಿ. ಜೋಲರಿಷ್, ಕುಂಚೂರು ಇಬ್ರಾಹಿಮ್, ರಿಯಾಜ್, ಮುಷಾಸಾಬ್, ವಾಹಬ್ ಸಾಬ್, ಎಂ.ಕೆ. ಜಾವಿದ್, ಎಸ್.ಕೆ. ಜಬಿ, ಜಾಕೀರ್, ಎಂ.ಕೆ. ಮುನಾವರ್, ಎಂ.ಕೆ. ಅಬ್ದುಲ್ ಇತರರು ಇದ್ದರು.

Leave a Comment