ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಸ್ಥಾನ ನೀಡಲು ಒತ್ತಾಯ

ರಾಯಚೂರು.ಸೆ.08- ನಗರಸಭೆ ಇತಿಹಾಸದಲ್ಲಿ ಇಲ್ಲಿವರೆಗೂ ಅಲ್ಪಸಂಖ್ಯಾತರಿಗೆ ಅಧಿಕಾರ ದೊರೆಯದೆ, ವಂಚಿತಗೊಂಡಿದ್ದು, ಈ ಸಲ ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಕನ್ನಡಾಂದ್ರ ರಾಷ್ಟ್ರ ಸಮಿತಿ ವ್ಯವಸ್ಥಾಪಕ ಅಧ್ಯಕ್ಷರಾದ ಮಹ್ಮದ್ ಮಹಿಬೂಬ್ ಅಲಿ ಒತ್ತಾಯಿಸಿದ್ದಾರೆ.
60 ವರ್ಷಗಳಿಂದ ಹಲವು ಅವಕಾಶ ಒದಗಿ ಬಂದಿದ್ದರೂ, ಇಲ್ಲವರೆಗೂ ಅಧಿಕಾರ ನೀಡುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಲವಾದರೂ, ಅವಕಾಶ ನೀಡುವಂತೆ ಅವರು ಒತ್ತಾಯಿಸಿದ್ದಾರೆ. ಗೆಲ್ಲುವ ಆಕಾಂಕ್ಷಿಗಳಿಗೆ ಪಕ್ಷ ಟಿಕೆಟ್ ನೀಡದೆ, ವಂಚಿಸಲಾಗಿದೆ. ಆದ ಕಾರಣ ಅಧ್ಯಕ್ಷ ಸ್ಥಾನ ನೀಡುವಂತೆ ಮನವಿ ಮಾಡಿದರು.

Leave a Comment