ಅಲಿಯಾಭಟ್, ರಣವೀರ್‌ಗೆ ಶ್ರೇಷ್ಠ ನಟ-ನಟಿ ಪ್ರಶಸ್ತಿ -ಫಿಲಂಫೇರ್ ಪ್ರಶಸ್ತಿ ಪ್ರದಾನ

ಮುಂಬೈ, ಫೆ. 16- ಅಲಿಯಾಭಟ್ ಶ್ರೇಷ್ಠ ನಟಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. `ಬೆಲ್ಲಿಬಾಯ್’ ಚಲನಚಿತ್ರ 13 ಪ್ರಶಸ್ತಿಗಳನ್ನು ಬಾಚಿಕೊಂಡು ಇತಿಹಾಸ ನಿರ್ಮಿಸಿದೆ.

ನಿನ್ನೆ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರನ್ನು ಗೌರವಿಸಲಾಯಿತು.
ಬೆಲ್ಲಿಬಾಯ್ ನಾಮ ನಿರ್ದೇಶನಗೊಂಡಿದ್ದ 13 ವಿಭಾಗಗಳಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ `ಬ್ಲ್ಯಾಕ್’ ಚಲನಚಿತ್ರ 11 ಪ್ರಶಸ್ತಿಗಳ ದಾಖಲೆಯನ್ನು ಬೆಲ್ಲಿಬಾಯ್ ಹಿಂದಿಕ್ಕಿದೆ.

filmfare
ಫಿಲಂಫೇರ್ ಪ್ರಶಸ್ತಿ
ಬೆಲ್ಲಿಬಾಯ್ ಉತ್ತಮ ಚಲನಚಿತ್ರ, ಇದೇ ಚಿತ್ರ ನಿರ್ದೇಶಿಸಿದ ಜೋಯಾ ಅಕ್ತರ್‌ಗೆ ಶ್ರೇಷ್ಠ ನಿರ್ದೇಶಕ, ಅಲಿಯಾಭಟ್ ಶ್ರೇಷ್ಠ ನಟಿ ಹಾಗೂ ರಣವೀರ್‌ಸಿಂಗ್ ಶ್ರೇಷ್ಠ ನಟ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಚಿತ್ರದಲ್ಲಿನ ಮುರಾದ್ ರಣವೀರ‌ನ ತಾಯಿ ರಾಜಿಯಾ ಪಾರತ್ರ ನಿರ್ವಹಿಸಿದ್ದ ಅಮೃತಾ ಸುಭಾಷ್ ಅತ್ಯುತಮ ಪೋಷಕ ನಟಿ ನೀಡಿ ಗೌರವಿಸಲಾಯಿತು.
ಅತ್ಯುತ್ತಮ ಚಿತ್ರ ಬೆಲ್ಲಿಬಾಯ್, ಅತ್ಯುತ್ತಮ ನಿರ್ದೇಶಕಿ ಜೋಯಾ ಅಕ್ತರ್, ಅತ್ಯುತ್ತಮ ಚಿತ್ರ (ವಿಮರ್ಶಕರ ಆಯ್ಕೆ) ಆರ್ಟಿಕಲ್-15 (ಅನುಭವ್ ಸಿನ್ಹಾ) ಮತ್ತು ಸಂಚಿರಿಯಾ (ಅಭಿಷೇಕ್ ಚುಬೆ), ಆಯುಷ್ಮಾನ್ ಕುರಾನಾ (ವಿಮರ್ಶಕರ ಆಯ್ಕೆ), ಭೂಮಿ ಪೆಡ್ನೇಕರ್ ಮತ್ತು ತಾಪ್ಸಿ (ಸಾಂದ್‌ ಕೀ ಆಂಕ್), ಅತ್ಯುತ್ತಮ ಪೋಷಕ ನಟಿ ಅಮೃತ ಸುಭಾಷ್ (ಬೆಲ್ಲಿಬಾಯ್), ಅತ್ಯುತ್ತಮ ಪೋಷಕ ನಟ ಸಿದ್ಧಾಂತ್ ಚತುರ್ವೇದಿ (ಬೆಲ್ಲಿಬಾಯ್), ಉತ್ತಮ ಸಂಗೀತ ಬೆಲ್ಲಿಬಾಯ್ (ಜೋಯಾ ಅಕ್ತರ್ ಮತ್ತು ಅತುಲ್ ತಿವಾರಿ), ಕಬೀರ್ ಸಿಂಗ್ (ಮಿಥುನ್, ಅಮಲ್ ಮಲ್ಲಿಕ್, ವಿಶಾಲ್ ಮಿಶ್ರಾ, ಸಾಚೇತ್ ಪರಂಪರ ಮತ್ತು ಅಖಿಲ್ ಸಚದೇವ್, ಅತ್ಯುತ್ತಮ ಸಾಹಿತ್ಯ ಡಿವೈನ್ ಮತ್ತು ಅಂಕುರ್ ತಿವಾರಿ ಬೆಲ್ಲಿಬಾಯ್) ಅತ್ಯುತ್ತಮ ಹಿನ್ನೆಲೆ ಗಾಯಕ ಅಜಿತ್ ಸಿಂಗ್ ಹಾಗೂ ಹಿನ್ನೆಲೆ ಗಾಯಕಿ ಶಿಲ್ಪಾ ರಾವ್.
ಉದಯೋನ್ಮುಖ ನಿರ್ದೇಶಕ ಆದಿತ್ಯ ಧರ್ (ಉರಿ), ಉದಯೋನ್ಮುಖ ನಟ ಅಭಿಮನ್ಯು ದರ್ಸನಿ, ಉದಯೋನ್ಮುಖ ನಟಿ ಅನನ್ಯ ಪಾಂಡೆ, ಅತ್ಯುತ್ತಮ ಕತೆ, ಆರ್ಟಿಕಲ್ -15 (ಅನುಭವ್ ಸಿನ್ಹಾ ಮತ್ತು ಗೌರವ್ ಸೊಲಂಕಿ,), ಅತ್ಯುತ್ತಮ ಚಿತ್ರಕತೆ ಬೆಲ್ಲಿಬಾಯ್ (ಭೀಮಾ ಗಾಗ್ದಿ ಮತ್ತು ಜೋಯಾ ಅಕ್ತರ್), ಅತ್ಯುತ್ತಮ ಸಂಭಾಷಣೆ ಬೆಲ್ಲಿಬಾಯ್ (ವಿಜಯ್ ಮುಯೂರ), ಜೀವಮಾನ ಸಾಧನೆ ಪ್ರಶಸ್ತಿ ರಮೇಶ್ ಸಿಪ್ಪಿ, ಗೋವಿಂದ ಆರ್‌ಡಿ ಬರ್ಮಾ ಉದಯೋನ್ಮುಖ ಪ್ರಶಸ್ತಿ, ಉರಿ ಚಿತ್ರದಲ್ಲಿನ ಸಂಗೀತ ನೀಡಿದ ಶಾಶ್ವತ್ ಸಚಿದೇವ್‌ಗೆ ಲಭಿಸಿದೆ.
ಶ್ರೇಷ್ಠ ಸಂಗೀತ, ಉತ್ತಮ ಚಿತ್ರಕತೆ ಪ್ರಶಸ್ತಿ ಸೇರಿದಂತೆ ಒಟ್ಟು 13 ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಜೀವಮಾನದ ಸಾಧನೆಗಾಗಿ ಬಾಲಿವುಡ್‌ನ ಹೆಸರಾಂತ ನಿರ್ದೇಶಕ ರಮೇಶ್ ಸಿಪ್ಪಿ, ಹಿಂದಿ ಚಿತ್ರರಂಗದಲ್ಲಿನ ಶ್ರೇಷ್ಠ ಸಾಧನೆಗಾಗಿ ನಟ ಗೋವಿಂದ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಆರ್‌ಡಿ ಬರ್ಮನ್ ಪ್ರಶಸ್ತಿ `ಉರಿ’ ಚಲನಚಿತ್ರದ ನಿರ್ದೇಶಕ ಸಸ್ವತ್ ಸಚಿದೇವ್ ಅವರಿಗೆ ಲಭಿಸಿದೆ, ಅತ್ಯುತ್ತಮ ಗಾಯಕ ಪ್ರಶಸ್ತಿಗೆ ಹರ್ಜಿತ್ ಸಿಂಗ್ ಪಾತ್ರರಾಗಿದ್ದರೆ, ಶ್ರೇಷ್ಠ ಗಾಯಕಿ ಪ್ರಶಸ್ತಿಗೆ ಶಿಲ್ಪಾರಾವ್ ಭಾಜನರಾಗಿದ್ದಾರೆ.
ಮೊದಲ ಬಾರಿಗೆ ಉರಿ ಚಲನಚಿತ್ರ ನಿರ್ದೇಶಿಸಿ ಆದಿತ್ಯದಾರ್, ಶ್ರೇಷ್ಠ ಚಲನಚಿತ್ರ ಪ್ರಶಸ್ತಿ ಗಳಿಸಿದ್ದಾರೆ.

Leave a Comment