ಅರ್ಜುನ್ ಗುರೂಜೀಯನ್ನು ಭೇಟಿ ಮಾಡಿದ ಶಿವರಾಜ್ ಕುಮಾರ್

ಮೈಸೂರು. ನ.10: ಅವಧೂತ  ಅರ್ಜುನ್ ಗುರೂಜೀಯವರನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಭೇಟಿ ಮಾಡಿದರು.
ನಗರದ ಸೋನಾರ್ ಬೀದಿಯಲ್ಲಿರುವ ಅವರ ಸ್ವ ಗೃಹ ಕ್ಕೆ ಇಂದು ಮಧ್ಯಾಹ್ನ ಕುಟುಂಬ ಪರಿವಾರದ ಸಮೇತ ಭೇಟಿ ಮಾಡಿದ ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರು ಆಶೀರ್ವಾದ ಪಡೆದರು. ನಂತರ ಮಾತನಾಡಿ ನನಗೆ ಗುರುಗಳ ಸನ್ನಿಧಾನಕ್ಕೆ ಬಂದು ಮನಸ್ಸು ತುಂಬಾ ಹಗುರವಾಯಿತು. ಅವರ ದರ್ಶನ ಪಡೆದಿದ್ದು ನಮ್ಮ ಕುಟುಂಬ ಧನ್ಯತಾಭಾವ ಲಭಿಸಿದೆ ಎಂದರು. ಸುಮಾರು ಒಂದು ತಾಸುಗಳ ಕಾಲ ಅವರ ಬಳಿ ಚರ್ಚೆ ಮಾಡಿ ನಂತರ ಪ್ರಸಾದ ಸ್ವೀಕರಿಸಿದರು.

Leave a Comment