ಅರ್ಜುನನ ಆರೈಕೆ ಮಾಡಿದ ಯದುವೀರ್

ಮೈಸೂರು: ಸೆ.11- ದಸರಾದ ಪ್ರಮುಖ ಆಕರ್ಷಣೆಯಾದ ಗಜಪಡೆಗಳನ್ನು ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆರೈಕೆ ಮಾಡಿದ್ದಾರೆ.
ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಅರ್ಜುನ ಅಂಡ್ ಟೀಂನ ಆನೆಗಳಿಗೆ ಮೈಸೂರು ಮಹಾರಾಜರು ಖುದ್ದು ಆರೈಕೆ ಮಾಡಿದರು. ಈ ವೇಳೆ ಅರ್ಜುನ ಆನೆಗೆ ಕಬ್ಬು, ಬೆಲ್ಲ ಹಾಗೂ ಬಾಳೆ ಹಣ್ಣನ್ನು ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ದಸರಾದಲ್ಲಿನ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯು ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದುಕೊಂಡಿದೆ. ಈ ಬಾರಿಯೂ ಸಹ ಅರ್ಜುನ ನಾಡದೇವಿ ಚಾಮುಂಡೇಶ್ವರಿಯನ್ನು ಹೊರಲಿದ್ದಾನೆ. ಹೀಗಾಗಿ ಅರ್ಜುನ ಹಾಗೂ ಇತರೆ ಆನೆಗಳಿಗೆ ಹೆಚ್ಚಿನ ಆರೈಕೆ ಮಾಡಲಾಗುತ್ತಿದೆ.

Leave a Comment