ಅಯೋಧ್ಯೆ ವಿವಾದ  ಹಿಂದೆ ಸರಿಯಲು ಸುನ್ನಿ ನಿರ್ಧಾರ

ನವದೆಹಲಿ, ಅ. ೧೬- ನೂರಾರು ವರ್ಷಗಳ ಐತಿಹಾಸಿಕ ಬಾಬರಿ ಮಸೀದಿ ನಿರ್ಮಾಣಗೊಂಡಿದ್ದ ಭೂಮಿಯ ಮೇಲಿನ ಹಕ್ಕನ್ನು ಸುನ್ನಿವಕ್ಫ್ ಬೋರ್ಡ್ ಬಿಟ್ಟು ಕೊಟ್ಟಿದೆ. ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ಪ್ರಕರಣದ ವಿಚಾರಣೆ ಕೊನೆಯ ದಿನವಾದ ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಅಪೀಲನ್ನು ಮುಂದುವರೆಸಲು ಬಯಸುವುದಿಲ್ಲ ಎಂದು ತಿಳಿಸಿರುವ ಸುನ್ನಿವಕ್ಫ್ ಬೋರ್ಡ್ ಭೂಮಿಯ ಮೇಲಿನ ಹಕ್ಕನ್ನು ಬಿಟ್ಟುಕೊಡುವುದಾಗಿ ನ್ಯಾಯಾಲಯದಲ್ಲಿ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಈಗಾಗಲೇ ರಾಜಿ ಮೂಲಕ ಇತ್ಯರ್ಥ ಸಂಬಂಧ ಅರ್ಜಿ ಸಲ್ಲಿಸಲಾಗಿದೆ. ಈ ವಿಷಯ ಕುರಿತಂತೆ ಹೆಚ್ಚಿನದೇನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅಯೋಧ್ಯೆ ವಿಚಾರಣೆಗೆ ಸಂಬಂಧಿಸಿದ ವರದಿ ತಿಳಿಸಿದೆ. ಯಾವ ಷರತ್ತುಗೊಳಪಟ್ಟು ಸುನ್ನಿವಕ್ಫ್ ಬೋರ್ಡ್ ಭೂಮಿಯ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಡುವ ನಿರ್ಧಾರ ತೆಗೆದುಕೊಂಡಿದೆ ಎನ್ನುವುದು ಇದುವರೆಗೂ ನ್ಯಾಯಾಲಯಕ್ಕೂ ಸ್ಪಷ್ಟಗೊಂಡಿಲ್ಲ.

ರಾಮಜನ್ಮ ಭೂಮಿ ಬಾಬರಿ ಮಸೀದಿ ಜಾಗ ಕುರಿತ ವಿಚಾರಣೆಯ ಕೊನೆಯ ದಿನವಾದ ಇಂದು ಸುನ್ನಿವಕ್ಫ್ ಬೋರ್ಡ್‌ನ ಈ ನಿರ್ಣಯ ಸಾಕಷ್ಟು ಅಚ್ಚರಿ ಬೆಳವಣಿಗೆಗೆ ಕಾರಣವಾಗಿದೆ.

ಇಂದು ಈ ಪ್ರಕರಣ ವಿಚಾರಣೆ ನಡೆಸುತ್ತಿರುವ ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಹೆಚ್ಚು ಸಮಯಾವಕಾಶವನ್ನು ಕೋರಿದ್ದಕ್ಕೆ ಕೆಂಡಾಮಂಡಲವಾಗಿದ್ದು, ಇದುವರೆಗೂ ಪ್ರಕರಣಕ್ಕೆ ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ಇನ್ನೂ ಹೆಚ್ಚು ಸಮಯಾವಕಾಶ ನೀಡಲಾಗಿಲ್ಲ. ಏನಿದ್ದರೂ ಪ್ರಕರಣವನ್ನು 5 ಗಂಟೆಯೊಳಗೆ ಮುಕ್ತಾಯಗೊಳಿಸಲು ಸೂಚಿಸಿದರು.

ನ್ಯಾಯಮೂರ್ತಿ ಗೊಗೊಯ್ ಕೆಂಗಣ್ಣಿಗೆ ಗುರಿಯಾದ ಮುಸ್ಲೀಂ ವಕೀಲ. ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಇಂದು ಅಂತ್ಯಗೊಳ್ಳಲಿದ್ದು, ಮುಸ್ಲಿಂ ವಕೀಲರೊಬ್ಬರು ತೋರಿಸಿದ ವರ್ತನೆಯಿಂದ ಮುಖ್ಯ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಸ್ಲಿಂ ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದ ವಕೀಲ ರಾಜುಧವನ್,ರಾಮಜನ್ಮ ಸ್ಥಾನದ ನಕ್ಷೆಯನ್ನು ಕೋರ್ಟಿನಲ್ಲೇ ಹರಿದು ಹಾಕುವ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾದರು.

ಇಂತಹ ವರ್ತನೆಗಳು ನ್ಯಾಯಾಲಯದ ಆವರಣದೊಳಗೆ ಸರಿಯಲ್ಲ. ಇದು ಮುಂದುವರೆದರೆ ನಾನೇ ನ್ಯಾಯಾಲಯದಿಂದ ಆಚೆ ಹೋಗುತ್ತೇನೆ ಎಂದು ವಕೀಲ ಧವನ್‌ಗೆ ಎಚ್ಚರಿಕೆ ನೀಡಿದರು.

Leave a Comment