ಅಯೋಧ್ಯೆ ತೀರ್ಪು ಸಂವಿಧಾನ ಮೌಲ್ಯ ಎತ್ತಿಹಿಡಿಯಲಿ

ನವದೆಹಲಿ, ಅ. ೨೧- ಅಯೋಧ್ಯೆಯ ರಾಮಜನ್ಮ ಭೂಮಿ ವಿವಾದದ ತೀರ್ಪು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ತೀರ್ಪು ಆಗಬೇಕು ಎಂದು ಸುನ್ನಿ ವಕ್ಫ್ ಮಂಡಳಿ ಹೇಳಿದೆ.
ಅಯೋಧ್ಯೆಯ ರಾಮಜನ್ಮಭೂಮಿ ವಿವಾದ ವಿಚಾರಣೆ ಸಂದರ್ಭದಲ್ಲಿ ಮುಚ್ಚಿದ ಲಕೋಟೆಯಲ್ಲಿ ತನ್ನ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ತಿಳಿಸಿರುವ ಸುನ್ನಿ ವಕ್ಫ್ ಮಂಡಳಿ, ಸುಪ್ರೀಂ ಕೋರ್ಟ್‌ನ ತೀರ್ಪು ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಜೊತೆಗೆ, ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುವಂತಹ ತೀರ್ಪು ಆಗಲಿ ಎಂದು ಹೇಳಿದೆ.
ಅಯೋಧ್ಯೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನೀಡುವ ತೀರ್ಪು ಸಂವಿಧಾನದ ಮೌಲ್ಯಗಳನ್ನು ನಂಬಿರುವ ಮಿಲಿಯನ್‌ಗಟ್ಟಲೆ ಜನರ ಮೇಲೆ ಪ್ರಭಾವ ಬೀರಲಿದೆ ಎಂದು ಸುನ್ನಿ ವಕ್ಫ್ ಮಂಡಳಿ ಹೇಳಿದೆ.
ಅಯೋಧ್ಯೆಯ ತೀರ್ಪು ದೇಶದ ಮೇಲೆ ಭಾರೀ ಪ್ರಭಾವ ಬೀರುವುದರಿಂದ ನ್ಯಾಯಾಲಯ ಎಲ್ಲಾ ಸಂಗತಿಗಳು, ತೀರ್ಪಿನಿಂದ ಆಗುವ ಪರಿಣಾಮ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ತೀರ್ಪು ನೀಡುವ ಅಗತ್ಯವಿದೆ ಎಂದು ಸುನ್ನಿ ವಕ್ಫ್ ಮಂಡಳಿ ತಿಳಿಸಿದೆ.
ಮುಂದಿನ ಪೀಳಿಗೆ ಈ ತೀರ್ಪು ಅನ್ನು ಯಾವ ದೃಷ್ಟಿಕೋನದಿಂದ ನೋಡಲಿದೆ ಎಂಬುದನ್ನು ನ್ಯಾಯಾಲಯ ಗಮನದಲ್ಲಿಟ್ಟುಕೊಳ್ಳಬೇಕು ಎಂದು ವಕ್ಫ್ ಮಂಡಳಿ ಹೇಳಿದೆ.

Leave a Comment