ಅಯೋಧ್ಯೆ ತೀರ್ಪು ಶಾಂತಿ ಕಾಪಾಡಲು ಮನವಿ

ಬೆಂಗಳೂರು, ನ. ೫- ಅಯೋಧ್ಯೆ ವಿವಾದ ಕುರಿತ ಸುಪ್ರೀಂಕೋರ್ಟ್ ತೀರ್ಪು ಏನೇ ಬರಲಿ, ಶಾಂತಿ ಸೌಹಾರ್ದ ಮೀರದಿರಲಿ, ಎನ್ನುವ ಘೋಷಣೆಯೊಂದಿಗೆ ಜನಜಾಗೃತಿ ಮೂಡಿಸುವ ದೃಷ್ಟಿಯಿಂದ ನ. 7 ರಂದು ಸಂಜೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶಾಂತಿ ದೀಪ ಹಚ್ಚುವ ಹಾಗೂ ಶಾಂತಿಗಾಗಿ ನಡಿಗೆ ಮೂಲಕ ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡಲು ತೀರ್ಮಾನಿಸಲಾಗಿದೆ ಎಂದು ಶಾಂತಿ ಮತ್ತು ನ್ಯಾಯಕ್ಕಾಗಿ ನಾವು ವೇದಿಕೆ ತೀರ್ಮಾನಿಸಿದೆ.
ನ. 13, 14 ರಂದು ಅಯೋಧ್ಯೆ ವಿವಾದ ಕುರಿತ ಸುಪ್ರೀಂಕೋರ್ಟ್ ತೀರ್ಪು ಹೊರ ಬರುವ ನಿರೀಕ್ಷೆಯಿದೆ. ದೇಶದಲ್ಲಿ ಶಾಂತಿ ಕಾಪಾಡುವ ಹಾಗೂ ನ್ಯಾಯಕ್ಕಾಗಿ ಒತ್ತಾಯಿಸುವ ಸಲುವಾಗಿ ವಿವಾದ ಸಂಘಟನೆಗಳು ಸೇರಿ ಶಾಂತಿ ಮತ್ತು ನ್ಯಾಯಕ್ಕಾಗಿ ನಾವು ಎಂಬ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ವೀರಸಂಗಯ್ಯ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ಪ್ರಗತಿಪರ ಸಂಘಟನೆಗಳ ಮುಖಂಡರುಗಳನ್ನೊಳಗೊಂಡ ನಿಯೋಗ. ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು.
1992 ಡಿಸೆಂಬರ್ 6 ರಂದು ನಡೆದ ಹಿಂಸಾಚಾರ ದೇಶದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸುವ ಮೂಲಕ ಅಮಾಯಕರು, ಮಹಿಳೆ, ಮಕ್ಕಳು ಮತ್ತು ಸಾಮಾನ್ಯ ಜನರ ಜೀವಭಯ ಉಂಟು ಮಾಡುವ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಶಾಂತಿ, ಸೌಹಾರ್ದತೆ ಕಾಪಾಡಲು ಸರ್ಕಾರದ ಜೊತೆಗೆ ನಮ್ಮ ವೇದಿಕೆ ಎಲ್ಲಾ ರೀತಿ ಸಹಕಾರ ನೀಡಲಿದೆ.
ಸುದ್ಧಿಗೋಷ್ಠಿಯಲ್ಲಿ ನಿರ್ಷಾದ್ ಅಹ್ಮದ್ ದೇಸಾಯಿ, ಮೈತ್ರಿ ಕೃಷ್ಣನ್, ಮೋಹನ್ ರಾಜ್, ವೆಂಕಟೇಶ್ ಉಪಸ್ಥಿತರಿದ್ದರು.

Leave a Comment