ಅಯೋಧ್ಯೆ ತೀರ್ಪು : ಮಸೀದಿಗಳಿಗೆ ಬೀಗಿ ಭದ್ರತೆ

ನಗರದಲ್ಲಿ ಪೊಲೀಸ್ ಪಥ ಸಂಚಲನ
ರಾಯಚೂರು.ನ.09- ಇಂದು ಸುಪ್ರೀಂಕೋರ್ಟ್‌ನಿಂದ ಅಯೋಧ್ಯೆ ತೀರ್ಪು ಪ್ರಕಟಗೊಳ್ಳುತ್ತಿದ್ದು, ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಪಥ ಸಂಚಲನ ನಡೆಸಲಾಯಿತು.
ಜಿಲ್ಲೆಯಲ್ಲಿರುವ 170 ಅತೀಸೂಕ್ಷ್ಮ ಪ್ರಾರ್ಥನಾ ಮಂದಿರಗಳಿಗೆ ಬೀಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪಥ ಸಂಚಲನವು ನಗರದ ತೀನ್‌ಕಂದಿಲ್ ವೃತ್ತದಿಂದ ಆರಂಭವಾಗಿ ಸುಪರ್ ಮಾರ್ಕೆಟ್, ಜಾಕೀರ್ ಹುಸೇನ ವೃತ್ತ, ಡಿಡಿಪಿಐ ಕಚೇರಿ ನಗರಸಭೆ, ಟಿಪ್ಪು ಸುಲ್ತಾನ ರಸ್ತೆಯಲ್ಲಿರುವ ಮೋತಿ ಮಸೀದಿ ಹತ್ತಿರವರೆಗೂ ಪೊಲೀಸರು ಪಥ ಸಂಚಲನ ನಡೆಸಿದರು.
ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಇಲಾಖೆಯು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಸೇರಿದದಂತೆ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
@12bc = ಬೀಗಿ ಪೊಲೀಸ್ ಭದ್ರತೆ
ಅಯೋಧ್ಯೆಯ ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿರುವ ಹಿನ್ನೆಲೆಯಲ್ಲಿ ಮಾನವಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಯಿತು.
ಪಟ್ಟಣದ ಅನೇಕ ಬೀದಿಗಳಲ್ಲಿ ಪೋಲಿಸರಿಂದ ಪಥ ಸಂಚಲನ ಹಾಗೂ ಅಟೋ ಧ್ವನಿ ವರ್ಧಕ ಮೂಲಕ ಸಾರ್ವಜನಿಕರು ಗುಂಪು ಇರದಂತೆ ಹಾಗೂ ಪಟಾಕಿ ಸಿಡಿಸದಂತೆ ತೀರ್ಪಿಗೆ ಸಂಬಂಧಿಸಿದಂತೆ ಯಾವುದೇ ಸಂಭ್ರಮಾಚರಣೆ ಹಾಗೂ ಶೋಕಾಚರಣೆ ಮಾಡದಂತೆ ಪೋಲಿಸ ಇಲಾಖೆಯ ವತಿಯಿಂದ ಶನಿವಾರ ಬೆಳಿಗ್ಗೆ 6 ರಿಂದ ಭಾನುವಾರ ಮುಂಜಾನೆ 10 ಘಂಟೆಯವರೆಗೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಿ ಪಿ ಐ ದತ್ತಾತ್ರೇಯ ಕಾರ್ನಾಡ್ ಹಾಗೂ ಪಿ ಎಸ್ ಐ ರಂಗಪ್ಪ ದೊಡ್ಡಮನಿಯವರು ತಿಳಿಸಿದ್ದಾರೆ.
@12bc = ಎರಡು ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತ
ಅಯೋಧ್ಯಾ ತೀರ್ಪು ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಸ್ಪಿ ವೇದಮೂರ್ತಿ ಅವರ ಸೂಚನೆ ಮೇರೆಗೆ ಪಟ್ಟಣ ಸಾರಿಗೆ ಇಲಾಖೆ ಎರಡು ಗಂಟೆಗೂ ಅಧಿಕ ಕಾಲ ಬಸ್ ಸಂಚಾರ ಶನಿವಾರ ಸ್ಥಗಿತಗೊಳಿಸಲಾಗಿತ್ತು. ರಾಯಚೂರು ಮಾನ್ವಿ ಸಿರವಾರ ಜಾಲಹಳ್ಳಿ ಗಬ್ಬೂರು ಸೇರಿದ ಪಟ್ಟಣಗಳಿಗೆ ಸಂಚರಿಸುವ ಬಸ್ಸುಗಳನ್ನು ಸಾರಿಗೆ ಘಟಕದಲ್ಲಿ ನಿಲ್ಲಿಸಲಾಗಿತ್ತು. ಬೇರೆ ಘಟಕದ ಬಸ್ಸುಗಳನ್ನು ಬಸ್ ನಿಲ್ದಾಣದೊಳಗೆ ನಿಲ್ಲಿಸಲಾಗಿತ್ತು. ಇದರಿಂದ ವಿವಿಧಡೆ ಹೋಗಬೇಕಾಗಿದ್ದ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು. ಮಧ್ಯಾಹ್ನ 12 ಗಂಟೆಗೆ ಬಸ್ ಸಂಚಾರ ಪುನಹ ಆರಂಭವಾಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಪಟ್ಟಣ ಸೇರಿ ತಾಲೂಕಾದ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಪಟ್ಟಣದ ಬಸವೇಶ್ವರ ವೃತ್ತ, ಜೈರುದ್ದಿನ್ ಪಾಷಾ ಸರ್ಕಲ್, ಅಂಬೇಡ್ಕರ್ ವೃತ್ತ, ಕಟಗರ್ ಕಟ್ಟೆ ಸೇರಿದಂತೆ ವಿವಿಧಡೆ ಕೆಎಸ್ಸಾರ್ಪಿ ತುಕಡಿಯನ್ನು ನಿಯೋಜಿಸಿ ಕೈಗೊಳ್ಳಲಾಗಿತ್ತು. ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

Leave a Comment