ಅಯೋಗ್ಯ ಚಿತ್ರದ ಸಹ ನಟಿಗೆ ಸಂಕಷ್ಟ

ಬೆಂಗಳೂರು, ನ 15- ಅಯೋಗ್ಯ ಚಿತ್ರದ ಸಹ ನಟಿ ದೃಶ್ಯಗೆ ಈಗ ಸಂಕಷ್ಟ ಎದುರಾಗಿದೆ. ಹಣ ವಾಪಾಸ್‌ ಕೇಳಿದ ಉದ್ಯಮಿ ರಾಜೇಶ್‌ ಎಂಬವರ ಮೇಲೆ ರೌಡಿಗಳ ಮೂಲಕ ಹಲ್ಲೆ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ರಾಜೇಶ್‌ ಕುಂದಾಪುರದ ಮೂಲದವರಾಗಿದ್ದು, ಇವರು ದೃಶ್ಯಗೆ ಹಣ ಕೊಟ್ಟಿದ್ದರಂತೆ. ಇದನ್ನು ವಾಪಾಸ್‌ ಕೇಳಿದ ವೇಳೆ ಶ್ರೀರಂಗಪಟ್ಟಣದ ಬಲಮುರಿ ಬಳಿ ರೌಡಿಗಳನ್ನು ಬಳಸಿಕೊಂಡು ರಾಜೇಶ್‌ ಅವರ ಮೇಲೆ ರೇಜರ್‌ ನಿಂದ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜೇಶ್‌, ಕಳೆದ 7 ತಿಂಗಳ ಹಿಂದೆ ಇವರುಗಳು ಪರಿಚಿತರಾಗಿದ್ದು, ಹಣದ ಅವಶ್ಯಕತೆ ಇದ್ದ ಕಾರಣ ನೀಡುವಂತೆ ಕೇಳಿಕೊಂಡಿದ್ದರು. ಈಗಾಗಲೇ ಅವರಿಗೆ ಲಕ್ಷಾಂತರ ರೂ. ಹಣ ನೀಡಿದ್ದು, ವಾಪಾಸ್‌ ಕೇಳಿದಾಗ ಹೈದರಾಬಾದಿಗೆ ಕರೆಸಿಕೊಂಡು ಬಳಿಕ ನನ್ನ ವಿರುದ್ದ ಸುಳ್ಳು ದೂರು ದಾಖಲಿಸಿದ್ದರು.

ಆ ಬಳಿಕ ನಾನು ವಾಪಾಸ್‌ ಬಂದಿದ್ದು, ಆದರೆ ಈಗ ಬೈಕ್‌ ನಲ್ಲಿ ಬಂದ ನಾಲ್ವರು ಯುವಕರು ಆಕೆಯ ಬಳಿ ಹಣ ಕೇಳುತ್ತಿಯಾ ಎಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಕೂಗಿಕೊಂಡಾಗ ಸ್ಥಳೀಯರು ಬಂದಿದ್ದು, ಆಗ ಓಡಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

 

Leave a Comment