ಅಮ್ಮನ ಹತ್ತಿರ ಮನಬಿಚ್ವಿ ಮಾತನಾಡಿ – ನ್ಯಾ. ಸಂದೀಪ ಸಲಹೆ

ನವಲಗುಂದ, ಸೆ 9-ನಬಡತನದ ರೇಖೆಗಳಿಗಿಂತ ಕೆಳಗಿರುವ ಕುಟುಂಬಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವುದಿಲ್ಲವೆಂಬ ಉದ್ದೇಶದಿಂದಲೇ ಸರಕಾರ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಗೆ ತಂದು ಅಪೌಷ್ಟಿಕತೆ ನಿವಾರಣೆ ಮಾಡುತ್ತಿದ್ದು ಮಕ್ಕಳು ಕೂಡ ಜಾಗೃತರಾಗಿ ಪೌಷ್ಟಿಕÀ ಆಹಾರ ಸೇವನೆ ಮಾಡುವ ಮೂಲಕ ಸದೃಡರಾಗಿ ಓದುವ ಆಸಕ್ತಿ ಹೆಚ್ಚಿಸಿಕೊಳ್ಳುವಂತೆ ಹಿರಿಯ ದಿವಾಣಿ ನ್ಯಾಯಾಧೀಶ ಸಂದೀಪ ಸಾಲಿಯಾನ ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.
ಶುಕ್ರವಾರ ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.8 ರಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಿವಿಧ ಸರ್ಕಾರದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳಿಗೆ ತಾಜಾ ಹಣ್ಣುಗಳನ್ನು ವಿತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಯಾಧೀಶ ಸಂದೀಪ ಸಾಲಯಾನ ಜೋಳದ ರೊಟ್ಟಿ ಊಟ, ತರಕಾರಿ ಸೊಪ್ಪುಗಳ ಊಟದಿಂದ, ತಾಜಾ ಹಣ್ಣುಗಳ ಸೇವನೆಯಿಂದ ಮಕ್ಕಳಿಗೆ ಒಳ್ಳೆಯ ಪೌಷ್ಟಿಕಾಂಶ ಸಿಗುತ್ತದೆ ಎಂದು ಯಾವ ಹೊಟೆಲ್‍ನವರು ಅಂಗಡಿಗಳ ಮುಂದೆ ಜಾಹೀರಾತು ಹಾಕಿ ಜಾಗೃತಿ ಮೂಡಿಸುವುದಿಲ್ಲ. ಇದರಿಂದಾಗಿ ಮಕ್ಕಳು ಮ್ಯಾಗಿ, ಚಾಕಲೆಟ್‍ನಂತಹ ವಸ್ತುಗಳಿಗೆ ಮಾರು ಹೋಗಿ ಆಹಾರದ ಸಮತೋಲನವನ್ನು ಕಳೆದುಕೊಳ್ಳುವಂತಾಗಿದೆ ಎಂದರು.
ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಘಟನೆಗಳ ಬಗ್ಗೆ, ಕಿಟಲೆ ಮಾಡುವವರ ಕುರಿತು ಮಕ್ಕಳು ತಮ್ಮ ಅಮ್ಮನ,  ಗುರುಗಳ ಹಾಗೂ ತಾವು ವಿಶ್ವಾಸ ಇಟ್ಟಿರುವ ವ್ಯಕ್ತಿಗಳ ಜೊತೆ ಯಾವುದೆ ಹೆದರಿಕೆ ಇಲ್ಲದೇ ಮನಬಿಚ್ಚಿ ಮಾತನಾಡುವುದನ್ನು ರೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಧಾನ ಗುರುಗಳಾದ ಪಿ.ಎನ್.ಅಡ್ನೂರ ಅಧ್ಯಕ್ಷತೆ ವಹಿಸಿದ್ದರು. ದಿವಾಣಿ ನ್ಯಾಯಾಧೀಶರಾದ ಸುನೀಲ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಎಸ್.ಎನ್.ಡಂಬಳ ಮಕ್ಕಳ ಕಾನೂನು ಕುರಿತು ಹಾಗೂ ಸಿ.ಡಿ.ಪಿ.ಓ ಕಚೇರಿಯ ಮೇಲ್ವಿಚಾರಕಿ ಭಾರತಿ ಕಾಲಚೆಟ್ಟಿ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆ ಕುರಿತು ಉಪನ್ಯಾಸ ನೀಡಿದರು.
ಶಿಕ್ಷಕರಾದ ಎ.ಬಿ.ಕೊಪ್ಪದ, ವಕೀಲೆ ಎಸ್.ಎಸ್.ಸೋಮನಕಟ್ಟಿ, ಪುರಸಭೆ ಸದಸ್ಯೆ ಅನಸೂಯಾ ಭೋವಿ, ನಿಂಗಪ್ಪ ಹಂಚಿನಾಳ,  ಎಸ್.ಹಿರಗಣ್ಣನವರ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Leave a Comment