ಅಮೆರಿಕಾ ಸೇನಾ ಸಂಪರ್ಕ ಉಪಗ್ರಹ ಉಡಾವಣೆ

  • ಉತ್ತನೂರು ವೆಂಟಕೇಶ್

ಅಮೆರಿಕಾದ ಸೇನಾ ಬಳಕೆಗಾಗಿ ಆತ್ಯಾಧುನಿಕ ಸಂಪರ್ಕ ಉಪಗ್ರಹ ಡಬ್ಯ್ಲೂ‌ಜಿಎಸ್ -10 ವನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಅಮೆರಿಕಾದ ಬೋಯಿಂಗ್ ಸಂಸ್ಥೆ ನಿರ್ಮಾಣ ಮಾಡಿರುವ ವೈಟ್ ಬ್ಯಾಂಡ್ ಗ್ಲೊಬಲ್ ಸ್ಟಾಟ್ ಕಾಂ. (ಡಬ್ಲ್ಯೂ‌ಜಿಎಸ್) ಹೆಸರಿನ ಅತ್ಯಾಧುನಿಕ ಸಂಪರ್ಕ ಉಪಗ್ರಹವನ್ನು ಶುಕ್ರವಾರ ಸಂಜೆ 8.26 ಕ್ಕೆ ಪ್ಲಾರಿಡಾದ ಕೇಪ್ ಕಾನೆವೆರಾಲ್  ವಾಯು ನೆಲೆಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

  • ಈಗಾಗಲೇ ಹಲವಾರು ಸೇನಾ ಸಂಪರ್ಕ ಉಪಗ್ರಹಗಳ ಸೇವೆಯನ್ನು ಬಳಸಿಕೊಳ್ಳುತ್ತಿರುವ ಅಮೆರಿಕಾ ಶುಕ್ರವಾರ ಮತ್ತೊಂದು ಸೇನಾ ಸಂಪರ್ಕ ಉಪಗ್ರಹವನ್ನು ಉಡಾವಣೆ ಮಾಡಿದೆ.
  • ಯಾವುದೇ ರಾಷ್ಟ್ರದ ಸೇನಾ ಕಾರ್ಯಾಚರಣೆಗೆ ಉಪಗ್ರಹ ಸಂಪರ್ಕ ಅತ್ಯಗತ್ಯ. ಈ ಹಿನ್ನೆಲೆಯಲ್ಲಿಯೇ ಅಮೆರಿಕಾದ ಹಲವಾರು ಸೇನಾ ಸಂಪರ್ಕ ಉಪಗ್ರಹಗಳು ಈಗ ಕಾರ್ಯ ನಿರ್ವಹಿಸುತ್ತಿವೆ.
  • ಬೋಯಿಂಗ್ ಸಂಸ್ಥೆ ನಿರ್ಮಾಣ ಮಾಡಿರುವ (ಡಬ್ಲ್ಯೂಜಿಎಸ್) ಹೆಸರಿನ ಅತ್ಯಾಧುನಿಕ ಸಂಪರ್ಕ ಉಪಗ್ರಹ ದೇಶದ ಮೂಲೆ ಮೂಲೆಯಲ್ಲಿರುವ ಅಮೆರಿಕಾ ಸೇನಾ ನೆಲೆಗಳಿಗೆ ಅತೀ ಶೀಘ್ರ ಹಾಗೂ ನಿಖರ ಸಂಪರ್ಕವನ್ನು ಒದಗಿಸುತ್ತದೆ ಎಂದು ಅಮೆರಿಕಾ ವಾಯು ಪಡೆ ಹೇಳಿದೆ.

vicharara-2-17-03-2019ಯುನೈಟೆಡ್ ಲಾಂಚ್ ಅಲಿಯೆನ್ಸ್ ನ ಡೆಲ್ಟಾ-4 ರಾಕೆಟ್ ಮೂಲಕ ಉಡಾವಣೆ ಮಾಡಲಾದ ಈ ಉಪಗ್ರಹ ನಿಗದಿತ ವೇಳೆಯಲ್ಲಿ ಕಕ್ಷೆಗೆ ಸೇರ್ಪಡೆಯಾಗಿದೆ ಎಂದು ನಾಸಾ ಹೇಳಿದೆ.

ಈ ಉಪಗ್ರಹ ತನ್ನ ಎಕ್ಸ್ ಮತ್ತು ಕೆ. ಬ್ಯಾಂಡ್ ಗಳ ಮೂಲಕ ಮೂಲೆ ಮೂಲೆಯಲ್ಲಿರುವ ಅಮೆರಿಕಾ ಸೇನಾ ನೆಲೆಗಳಿಗೆ ಸಂಪರ್ಕ ಒದಗಿಸುತ್ತದೆ. ಈ ಉಪಗ್ರಹ ವಾಯು ಪಡೆ, ನೌಕಾ ಪಡೆ ಮತ್ತು ಭೂ ಪಡೆ ಈ ಮೂರು ಸೇನಾ ವಿಭಾಗಗಳಿಗೆ ನಿಕಟ ಕಾರ್ಯಾಚರಣೆಗೆ ಅಗತ್ಯವಿರುವ ಸಂಪರ್ಕ ಕಲ್ಪಿಸುತ್ತದೆ ಎಂದು ಅಮೆರಿಕಾದ ವಾಯುಪಡೆ ಅಧಿಕಾರಿಗಳು ಹೇಳಿದ್ದಾರೆ.

ಸೇನಾ ಕಾರ್ಯಾಚರಣೆಗೆ ಅಗತ್ಯವಿರುವ ಬೇಹುಗಾರಿಕೆ ಮಾಹಿತಿ ಕಲೆ ಹಾಕುವುದು, ಶತ್ರು ರಾಷ್ಟ್ರಗಳ ಸೇನಾ ನೆಲೆ, ವಾಯು ನೆಲೆಗಳ ಮೇಲೆ ನಿಗಾ ಇಡುವುದು. ಹಾಗೂ ಕಾರ್ಯಾಚರಣೆಗೆ ದಿಕ್ಸೂಚಿ ಸಂಪರ್ಕ ವ್ಯವಸ್ಥೆ ಒದಗಿಸುವುದು. ಈ ಸೇನಾ ಉಪಗ್ರಹಗಳ ಪ್ರಮುಖ ಕಾರ್ಯವಾಗಿದೆ.

Leave a Comment