ಅಮೆರಿಕಾ ಸಂಪರ್ಕ ಉಪಗ್ರಹ ಧ್ವಂಸ ಮಾಡಬಲ್ಲ ರಷ್ಯಾ ಕ್ಷಿಪಣಿ

ಅಮೆರಿಕಾದ ಸಂಪರ್ಕ ಮತ್ತು ದಿಕ್ಸೂಚಿ ಉಪಗ್ರಹಗಳ ವ್ಯವಸ್ಥೆಯನ್ನೇ ಹಾಳು ಮಾಡಬಲ್ಲ ಕ್ಷಿಪಣಿಯನ್ನು ರಷ್ಯಾ ಅಭಿವೃದ್ಧಿಪಡಿಸಿ ಯಶಸ್ವಿಯಾಗಿ ಉಡಾವಣೆ ಮಾ‌ಡಿದೆ.

ರಷ್ಯಾದ ನುಡೋಲ್ ಹೆಸರಿನ ಕ್ಷಿಪಣಿಯನ್ನು 6ನೇ ಬಾರಿಗೆ ರಷ್ಯಾ ಇತ್ತೀಚೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಏಪ್ರಿಲ್ 2 ರಂದು ರಷ್ಯಾದ ಪಾಲೆಸ್ಟರ್ ಕಾಸ್ಮೊಡ್ರಾಮ್‌ನಿಂದ ಪಿ.ಎಲ್.ಸಿ. ನುಡೋಲ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. 2015 ರಲ್ಲಿಯೇ ಇದರ ಮೊದಲ ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ಈಗ ಇದನ್ನು ಇನ್ನು ಸುಧಾರಿಸಿ 6ನೇ ಬಾರಿಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಅಮೆರಿಕಾದ ದಿಕ್ಸೂಚಿ ಮತ್ತು ಸಂಪರ್ಕ ಉಪಗ್ರಹಗಳನ್ನು ಕಕ್ಷೆಯಲ್ಲಿಯೇ ಧ್ವಂಸ ಮಾಡಬಲ್ಲ, ರಷ್ಯಾದ ಈ ನುಡೋಲ್ ಕ್ಷಿಪಣಿ ಯಶಸ್ಸಿನ ಬಗ್ಗೆ ಅಮೆರಿಕಾ ಆತಂಕ ಗೊಂಡಿದೆ.

ಇದರಿಂದ ಜಿಪಿಎಸ್ ಆಧಾರಿತ ತನ್ನ ವಾಯು ದಾಳಿಗೆ ಧಕ್ಕೆಯಾಗುತ್ತವೆ ಎಂಬುದೇ ಅಮೆರಿಕಾ ಆತಂಕ. ದಿಕ್ಸೂಚಿ ಉಪಗ್ರಹ ಆಧರಿಸಿ ಅಮೆರಿಕಾ ಕ್ಷಿಪಣಿ ದಾಳಿಯನ್ನು ದಿಕ್ಕು ತಪ್ಪಿಸುವುದೇ ರಷ್ಯಾದ ನುಡೋಲ್ ಕ್ಷಿಪಣಿಯ ಅಭಿವೃದ್ಧಿಯ ಗುರಿಯಾಗಿದೆ.

ಒಂದು ವೇಳೆ ರಷ್ಯಾ ಅಮೆರಿಕಾದ ಸಂಪರ್ಕ ಉಪಗ್ರಹಗಳ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ದಾಳಿಗೆ ಮುಂದಾದರೆ ಅಮೆರಿಕಾದ ಈಗಿನ ಜಿಪಿಎಸ್ ವ್ಯವಸ್ಥೆ ತಲೆಕೆಳಗಾಗುತ್ತದೆ. ಜಿಪಿಎಸ್ ಆಧಾರಿತ ಅಮೆರಿಕಾದ ವಾಯುದಾಳಿಗೂ ಭಾರೀ ಹಿನ್ನಡೆಯಾಗುತ್ತದೆ.

ಉಪಗ್ರಹದ ಗುರಿ

ದಾಳಿ ಮಾಡಬೇಕಾಗಿರುವ ಸಂಪರ್ಕ ಉಪಗ್ರಹವನ್ನು ಮೊದಲಿಗೆ ಗುರುತಿಸಲಾಗುವುದು. ಅದು ಕಕ್ಷೆಯಲ್ಲಿ ಸುತ್ತುತ್ತ, ದಾಳಿಗೆ ಸಜ್ಜಾಗಿರುವ ಕ್ಷಿಪಣಿ ಕೇಂದ್ರದ ಮೇಲು ಭಾಗದಲ್ಲಿ ಅದರ ಭೂ ಸಂಪರ್ಕ ಏರ್ಪಡುವ ಸಂದರ್ಭದಲ್ಲಿ ಅದನ್ನು ಧ್ವಂಸಗೊಳಿಸಲು ಕ್ಷಿಪಣಿ ನೂಡಲ್ ಕ್ಷಿಪಣಿಯನ್ನು ಉಡಾವಣೆ ಮಾಡಲಾಗುತ್ತದೆ.

ಉಡಾವಣೆಗೊಂಡ ಕ್ಷಿಪಣಿ ಉಪಗ್ರಹವನ್ನು ಭೇದಿಸಲು 90 ರಿಂದ 200 ನಿಮಿಷಗಳು ಬೇಕಾಗುತ್ತದೆ.

ಅತಿ ವೇಗದಲ್ಲಿ ಉಪಗ್ರಹದ ಸನಿಹ ಬರುವ ಕ್ಷಿಪಣಿ ಉಂಟು ಮಾಡುವ ಭಾರೀ ಕಂಪನ ಉಪಗ್ರಹದಿಂದ ಹೊರ ಬರುವ ಸಂಪರ್ಕವನ್ನು ಹಾಳು ಮಾಡುತ್ತದೆ.

ಯುದ್ಧದ ಆಕ್ರಮಣ ಮತ್ತು ರಕ್ಷಣಾ ವ್ಯವಸ್ಥೆಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆ ಊಹೆಗೂ ನಿಲುಕದಷ್ಟು ವೇಗದಲ್ಲಿ ಅಭಿವೃದ್ಧಿ ಹೊಂದಿದೆ. ಅಮೆರಿಕಾ-ರಷ್ಯಾದಂತಹ ರಾಷ್ಟ್ರಗಳು ಯುದ್ದಮಾಡಲು ಯುದ್ಧ ವಿಮಾನಗಳು, ಯುದ್ದ ಟ್ಯಾಂಕ್ ಗಳು, ವಿಮಾನ ವಾಹಕ ಯುದ್ದ ನೌಕೆ, ಸಬ್ ಮೇರಿನ್‌ಗಳ ಬಳಕೆಗಿಂತ ಮಿಗಿಲಾಗಿ ಈಗ ಇವುಗಳು ಕಾರ್ಯ ನಿರ್ವಹಿಸುವ ತಂತ್ರಜ್ಞಾನ ವ್ಯವಸ್ಥೆಯ ಮೇಲಿನ ಆಕ್ರಮಣ ಮತ್ತು ರಕ್ಷಣೆಯಲ್ಲಿ ಸಾಕಷ್ಟು ಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿದೆ.

ಸ್ಕೈ ಸ್ಯಾಟ್ ಲೈಟ್ ಸೈಬರ್ ದಾಳಿ, ಯುದ್ದ ಕಾರ್ಯಾಚರಣೆಗಾಗಿ ನಿಖರ ಗುರಿ ಮತ್ತು ಮಾಹಿತಿಯನ್ನು ಒದಗಿಸುವ ಉಪಗ್ರಹಗಳ ಕಾರ್ಯಾ ನಿರ್ವಹಣೆಯನ್ನು ಸ್ಥಗಿತಗೊಳಿಸುವ ಇಲ್ಲ ನಾಶ ಮಾಡುವ ತಂತ್ರಜ್ಞಾನವನ್ನು ಈ ಎರಡು ದೇಶಗಳು ಅಭಿವೃದ್ಧಿಗೊಳಿಸಿಕೊಂಡಿದೆ.

ತಮ್ಮ ನಗರಗಳನ್ನು ಶಸ್ತ್ರಾಸ್ತ್ರ ನೆಲೆಗಳಲ್ಲಿ ರಕ್ಷಿಸಿಕೊಳ್ಳಲು ಕ್ಷಿಪಣಿ ನಿರೋಧಕ ರಕ್ಷಣಾ ವ್ಯವಸ್ಥೆಗಳನ್ನು ಈ ರಾಷ್ಟ್ರಗಳು ಹೊಂದಿವೆ. ಅದೇ ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಇನ್ನಷ್ಟು ಸುಧಾರಿಸಿ ಬಾಹ್ಯಾಕಾಶದಲ್ಲಿರುವ ಶತ್ರುರಾಷ್ಟ್ರಗಳ ಗುಡಚಾರ ಸ್ಯಾಟಲೈಟ್ ಮತ್ತು ಸಂಪರ್ಕ ಉಪಗ್ರಹಗಳನ್ನು

ಒಡೆದು ಉರುಳಿಸುವ ಕ್ಷಿಪಣಿ ವ್ಯವಸ್ಥೆಯ ಭಾಗವೇ ರಷ್ಯಾದ ನುಡೋಲ್ ಕ್ಷಿಪಣಿ ವ್ಯವಸ್ಥೆ.

ಅಮೆರಿಕಾದ ಸಂಪರ್ಕ ಮತ್ತು ದಿಕ್ಸೂಚಿ ಉಪಗ್ರಹಗಳ ವ್ಯವಸ್ಥೆಯನ್ನೇ ಹಾಳು ಮಾಡಬಲ್ಲ ಕ್ಷಿಪಣಿಯನ್ನು ರಷ್ಯಾ ಅಭಿವೃದ್ಧಿಪಡಿಸಿ ಯಶಸ್ವಿಯಾಗಿ ಉಡಾವಣೆ ಮಾ‌ಡಿದೆ. ರಷ್ಯಾದ ನುಡೋಲ್ ಹೆಸರಿನ ಕ್ಷಿಪಣಿಯನ್ನು 6ನೇ ಬಾರಿಗೆ ರಷ್ಯಾ ಇತ್ತೀಚೆಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಏಪ್ರಿಲ್ 2 ರಂದು ರಷ್ಯಾದ ಪಾಲೆಸ್ಟರ್ ಕಾಸ್ಮೊಡ್ರಾಮ್‌ನಿಂದ ಪಿ.ಎಲ್.ಸಿ. ನುಡೋಲ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು,  2015 ರಲ್ಲಿಯೇ ಇದರ ಮೊದಲ ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ಈಗ ಇದನ್ನು ಇನ್ನು ಸುಧಾರಿಸಿ 6ನೇ ಬಾರಿಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಅಮೆರಿಕಾದ ದಿಕ್ಸೂಚಿ ಮತ್ತು ಸಂಪರ್ಕ ಉಪಗ್ರಹಗಳನ್ನು ಕಕ್ಷೆಯಲ್ಲಿಯೇ ಧ್ವಂಸ ಮಾಡಬಲ್ಲ, ರಷ್ಯಾದ ಈ ನುಡೋಲ್ ಕ್ಷಿಪಣಿ ಯಶಸ್ಸಿನ ಬಗ್ಗೆ ಅಮೆರಿಕಾ ಆತಂಕ ಗೊಂಡಿದೆ.

Leave a Comment