ಅಮೆರಿಕಾದ ನೀತಿ ಭಾರತಕ್ಕೆ ವರದಾನ

 

ವಾಷಿಂಗ್ಟನ್, ಆ. ೩: ಅಮೆರಿಕದ ಸಮರ ತಂತ್ರ ಪಾಲುದಾರನಂತಿರುವ ಭಾರತದಂತಹ ರಾಷ್ಟ್ರಗಳಿಗೆ ಅವುಗಳ ಬಾಕಿ ಮನ್ನಾ ಮಾಡುವ ಮತ್ತಿತರ ಅನುಕೂಲಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತುತ ಕಾನೂನು ತಿದ್ದುಪಡಿಗೆ ಅವಕಾಶವಿರುವ ರಕ್ಷಣಾ ವೆಚ್ಚ ಹೂಡಿಕೆ ಮಸೂದೆ ಮಂಡನೆಗೆ ಅಮೆರಿಕ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ.
ಇದರಿಂದಾಗಿ ರಷ್ಯಾದ ರಕ್ಷಣಾ ಉದ್ಯಮದೊಂದಿಗೆ ವ್ಯವಹಾರ ಇಟ್ಟುಕೊಂಡಿರುವ ಚೀನಾ, ಪಾಕಿಸ್ತಾನದಂತಹ ದೇಶಗಳಿಗೆ ದಂಡನಾತ್ಮಕ ಶಾಸನ ಇದಾಗಲಿದ್ದು, ಭಾರತಕ್ಕೆ ಅನುಕೂಲಕರವಾಗಿದೆ ಎಂದು ನಿರೀಕ್ಷಿಸಲಾಗಿದೆ.
ಉಭಯಪಕ್ಷೀಯ ೮೭-೧೦ ಮತಗಳೊಂದಿಗೆ ಮಹತ್ವಾಕಾಂಕ್ಷೆಯ ೨೦೧೯ನೇ ಹಣಕಾಸು ವರ್ಷಕ್ಕೆ ಈ ‘ರಾಷ್ಟ್ರೀಯ ರಕ್ಷಣಾ ದೃಢೀಕೃತ ಮಸೂದೆ (ಎನ್‌ಡಿಎಎ)’ ಅಧಿವೇಶನ ವರದಿಯನ್ನು ಅಮೆರಿಕ ಶಾಸನ ಸಭೆ ಅಂಗೀಕರಿಸಿತು.
ಮಂಜೂರಾತಿ ಕಾಯಿದೆ ಮೂಲಕ ಈ ಮುನ್ನ ಜಾರಿಯಲ್ಲಿದ್ದ ಅಮೆರಿಕದ ಮಸೂದೆಯು ಭಾರತದಂತಹ ಸುಸ್ತೀದಾರ ದೇಶಗಳಿಗೆ ರಕ್ಷಣಾ ಮಂಜೂರಾತಿ ತಡೆಗಟ್ಟುವ ಉದ್ದೇಶ ಹೊಂದಿತ್ತು. ಇದರಿಂದಾಗಿ ಭಾರತವು ರಷ್ಯಾದಿಂದ ‘ಎಸ್-೪೦೦’ ಎಂಬ ವಾಯು ದಳ ವ್ಯವಸ್ಥೆಯ ಐದು ರಕ್ಷಣಾ ಸಾಮಗ್ರಿಗಳನ್ನು ೪.೫ ಬಿಲಿಯನ್ (ಶತ ಕೋಟಿ) ಡಾಲರ್‌ಗೆ ಖರೀದಿಸಲು ಯೋಜಿಸಿತ್ತು. ಅಮೆರಿಕದ ಈಗಿನ ತಿದ್ದುಪಡಿ ಮಸೂದೆಯಿಂದಾಗಿ ಇದನ್ನು ತಡೆಗಟ್ಟಿದಂತಾಗಿದೆ.
೭೧೬ ಶತ ಕೋಟಿ ಡಾಲರ್ ಮೊತ್ತ ಮಂಜೂರಾತಿಗೆ ಅವಕಾಶವಿರುವ ಉದ್ದೇಶಿತ ಮಸೂದೆಗೆ ಶಾಸನ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಇದು ೨೦೧೯ರ ರಾಷ್ಟ್ರೀಯ ರಕ್ಷಣಾ ವೆಚ್ಚಕ್ಕೆ ಮೀಸಲಾಗಿದೆ ಎಂದು ಸಶಸ್ತ್ರ ಸೇವಾ ಸಮಿತಿ ಅಧ್ಯಕ್ಷ ಜಾನ್ ಮ್ಯಾಕೈನ್ ನಂತರ ಸ್ಪಷ್ಟಪಡಿಸಿದರು.
ಮಸೂದೆ ಇದೀಗ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸಹಿಗಾಗಿ ಶ್ವೇತ ಭವನಕ್ಕೆ ರವಾನೆಯಾಗಲಿದೆ.

Leave a Comment