ಅಮೆರಿಕದ ಹುಲಿಗೂ ಕೊರೋನಾ ಸೋಂಕು!

ನವದೆಹಲಿ, ಏ 6 -ಇಲ್ಲಿಯವರೆಗೆ ಮನುಷ್ಯ ಕುಲಕ್ಕೆ ಕಂಟಕವಾಗಿ ಕಾಡುತ್ತಿದ್ದ ಕೊರೋನಾ ವೈರಸ್ ಸೋಂಕು ಈಗ ಪ್ರಾಣಿಗಳಿಗೂ ವ್ಯಾಪಿಸುತ್ತಿದೆ. ಅಮೆರಿಕದ ಬ್ರಾನ್ಸ್ ಮೃಗಾಲಯದ ಹುಲಿಯೊಂದಕ್ಕೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.
4 ವರ್ಷದ ಹೆಣ್ಣು ಮಲಯನ್ ಹುಲಿ ನಡಿಯಾಗೆ ಒಣಕೆಮ್ಮು ಕಾಣಿಸಿಕೊಂಡಿತ್ತು. ಈಗ ಅದರ ತಂಗಿ ಅಸೂಲ್ ಮತ್ತು ಇತರ ಎರಡು ಹುಲಿ ಮತ್ತು ಮೂರು ಆಫ್ರಿಕಾದ ಸಿಂಹಗಳಲ್ಲಿ ಕೂಡ ಇದೇ ಲಕ್ಷಣಗಳು ಕಂಡುಬರುತ್ತಿವೆ.
ನಡಿಯಾ ಹುಲಿಯನ್ನು ತಪಾಸಣೆಗೊಳಪಡಿಸಿದ ರಾಷ್ಟ್ರೀಯ ಪಶು ಸೇವಾ ಪ್ರಯೋಗಾಲಯ, ಅದಕ್ಕೆ ಸೋಂಕಿರುವುದು ದೃಢಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಹುಲಿಗಳ ನಿರ್ವಹಣೆ ಮಾಡುತ್ತಿದ್ದ ಮೃಗಾಯಲದ ಉದ್ಯೋಗಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಆತನಿಂದ ಹುಲಿಗೆ ಹರಡಿದೆ ಎನ್ನಲಾಗಿದೆ. ಆದರೆ, ಈ ಉದ್ಯೋಗಿಗೆ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿದೆ.
ಹುಲಿಗಳು ಹೇಗೆ ಈ ಸೋಂಕಿಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ. ಸದ್ಯಕ್ಕೆ ಅವುಗಳ ತಪಾಸಣೆ ನಡೆಸುತ್ತಿದ್ದು, ಪೂರ್ಣ ಚೇತರಿಕೆಯ ಆಶಯದಲ್ಲಿದ್ದೇವೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.
ಈ ಮೃಗಾಲಯಕ್ಕೆ ಪ್ರಾಣಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

Leave a Comment