ಅಮೆರಿಕದ ಓಹಿಯೋ ಗುಂಡಿನ ದಾಳಿ: ಸಾವಿನ ಸಂಖ್ಯೆ 9ಕ್ಕೆ ಏರಿಕೆ

ವಾಷಿಂಗ್ಟನ್, ಆ  4 -ಅಮೆರಿಕದ ಓಹಿಯೋದಲ್ಲಿ ಭಾನುವಾರ ಮುಂಜಾನೆ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದು ಮತ್ತು ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಡೇಟನ್ ನಗರದಲ್ಲಿ ಬೆಳಿಗ್ಗೆ 1 ಗಂಟೆಗೆ ಈ ದಾಳಿ ಸಂಭವಿಸಿದೆ. ದಾಳಿಕೋರ ಮೃತಪಟ್ಟಿದ್ದಾನೆ. ಅಲ್ಲದೆ, ಇನ್ನೂ 9 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 16 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಡೇಟನ್ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.
ಈ ದಾಳಿ ಪ್ರಾರಂಭವಾದಾಗ ನಾವು ಸುತ್ತಮುತ್ತಲಿನ ಅಧಿಕಾರಿಗಳ ಜೊತೆಗಿದ್ದೆವು. ಹೀಗಾಗಿ ತಕ್ಷಣ ಪ್ರತಿಕ್ರಿಯಿಸಲು ಮತ್ತು ಅದನ್ನು ದಾಳಿಯನ್ನು ತ್ವರಿತವಾಗಿ ಕೊನೆಗೊಳಿಸಲು ಸಾಧ್ಯವಾಯಿತು ಎಂದು ಇಲಾಖೆ ಹೇಳಿದೆ.
ಅಮೆರಿಕದಲ್ಲಿ ಕಳೆದ 24 ಗಂಟೆಗಳ ಒಳಗೆ ಇದು ಎರಡನೇ ಸಾಮೂಹಿಕ ಗುಂಡಿನ ದಾಳಿಯಾಗಿದೆ.
ಗಡಿ ನಗರವಾದ ಟೆಕ್ಸಾಸ್ ರಾಜ್ಯದ ಎಲ್‌ ಪಾಸೊದಲ್ಲಿ ನಡೆದ ದಾಳಿಯಲ್ಲಿ 20 ಜನರು ಸಾವನ್ನಪ್ಪಿದರು ಮತ್ತು 26 ಮಂದಿ ಗಾಯಗೊಂಡಿದ್ದರು.

Leave a Comment