ಅಮೆರಿಕದಲ್ಲಿ 20 ಮಿಲಿಯನ್ ಮಾಸ್ಕ್ ವಿತರಿಸಲಿರುವ ಆ್ಯಪಲ್

 

ಮಾಸ್ಕೋ, ಏ 6 -ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಆ್ಯಪಲ್ ಮೊಬೈಲ್ ಕಂಪನಿ ಅಮೆರಿಕದ 20 ಮಿಲಿಯನ್ ಜನರಿಗೆ ರಕ್ಷಣಾ ಮಾಸ್ಕ್ ಗಳನ್ನು ತನ್ನ ಪೂರೈಕೆಯ ಸರಣಿಯ ಮೂಲಕ ಪೂರೈಸಿದೆ.
ಈ ಕುರಿತು ಕಂಪನಿ ಸಿಇಒ ಟಿಮ್ ಕ್ರೂಕ್ ಮಾಹಿತಿ ನೀಡಿದ್ದು, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆ್ಯಪಲ್ ಕೈಜೋಡಿಸಲಿದೆ. ಈಗ ನಾವು ನಮ್ಮ ಪೂರೈಕೆ ಸರಣಿ ಮೂಲಕ ವಿತರಿಸುತ್ತಿದ್ದೇವೆ. ಅದರ ವಿನ್ಯಾಸ, ಇಂಜಿನಿಯರಿಂಗ್, ಕಾರ್ಯಾಚರಣೆ ಮತ್ತು ಪ್ಯಾಕೇಜಿಂಗ್ ತಂಡಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಟ್ವೀಟ್ ಮಾಡಿದ್ದಾರೆ.
ಈ ವಾರದ ಆರಂಭದಿಂದಲೇ ಮಾಸ್ಕ್ ಗಳ ವಿತರಣೆ ಆರಂಭಗೊಂಡಿದೆ.
ಮಾರ್ಚ್ 11 ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಅಮೆರಿಕದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶವಾಗಿದ್ದು, 9600 ಜನರು ಸಾವನ್ನಪ್ಪಿದ್ದಾರೆ.

Leave a Comment