ಅಮೆಜಾನ್ ೧೦ ಲಕ್ಷ ಉದ್ಯೋಗ ಸೃಷ್ಟಿ

ನವದೆಹಲಿ, ಜ. ೧೭- ಭಾರತದಲ್ಲಿ ೨೦೨೫ರ ವೇಳೆಗೆ ೧೦ ಲಕ್ಷ ಹೊಸಉದ್ಯೋಗಗಳನ್ನು ಸೃಷ್ಟಿಸುವುದಾಗಿ ಇ-ಕಾಮರ್ಸ್‌ನ ಜಾಗತಿಕ ದೈತ್ಯ ಸಂಸ್ಥೆ ಅಮೆಜಾನ್ ಇಂದು ಘೋಷಿಸಿದೆ.
ಭಾರತದಲ್ಲಿ ಮುಂದಿನ ೫ ವರ್ಷಗಳಲ್ಲಿ ಬರೋಬ್ಬರಿ ೧೦ ಲಕ್ಷ ಹೊಸಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಯನ್ನು ಅಮೆಜಾನ್ ಸಂಸ್ಥೆ ಹೊಂದಿದ್ದು, ಭಾರತದಾದ್ಯಂತ ಉದ್ದಿಮೆಗಳು, ಮಾಹಿತಿ ತಂತ್ರಜ್ಞಾನ ಸಂಸ್ಥೆ, ಕೌಶಲ್ಯಾಭಿವೃದ್ದಿ, ರೀಟೇಲ್, ಲಾಜಿಸ್ಟಿಕ್ ಮತ್ತು ನಿರ್ಮಾಣ ವಲಯಗಳಲ್ಲಿ ಈ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದ್ದು, ಇವಕ್ಕೆ ನೇರವಾಗಿ ಮತ್ತು ಪರೋಕ್ಷ ಮಾರ್ಗಗಳಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಅಮೆಜಾನ್ ಸಂಸ್ಥೆ ಇಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಮೆಜಾನ್ ಸಂಸ್ಥೆ ಮುಖ್ಯಸ್ಥ ಜೆಫ್ ಬೆಜೋಸ್ ಮೊನ್ನೆಯಷ್ಟೇ ಭಾರತದಲ್ಲಿ ೭ ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು. ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಹಿವಾಟು ಹೆಚ್ಚಿಸುವ ಉದ್ದೇಶದ ಡಿಜಿಟಲೀಕರಣಕ್ಕೆ ಮುಂದಿನ ೫ ವರ್ಷಗಳಲ್ಲಿ ೭ ಸಾವಿರ ಕೋಟಿ ರೂ. ಮೊತ್ತವನ್ನು ಹೂಡಿಕೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ ಎಂದೂ ಮುಖ್ಯಸ್ಥ ಜೆಫ್ ಬೆಜೋಸ್ ಹೇಳಿದ್ದರು.

Leave a Comment