ಅಮೆಜಾನ್, ವಾಲ್‌ಮಾರ್ಟ್‌ ನಿಷೇಧಿಸಿ: ಸುಬ್ರಹ್ಮಣ್ಯ ಸ್ವಾಮಿ ಒತ್ತಾಯ

ನವದೆಹಲಿ,ಅ.21: ಭಾರತದಲ್ಲಿ ಅಮೆಜಾನ್ ಮತ್ತು ವಾಲ್‌ಮಾರ್ಟ್‌ ಅನ್ನು ನಿಷೇಧಿಸಬೇಕೆಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ‘ವಿದೇಶಿ ವ್ಯಾಪಾರ ಕಂಪೆನಿಗಳಾದ ಅಮೆಜಾನ್, ವಾಲ್‌ಮಾರ್ಟ್‌ ಸಂಸ್ಥೆಗಳ ಅವಶ್ಯಕತೆ ಏನಿದೆ?’ ಎಂದು ಅವರು ಪ್ರಶ್ನಿಸಿದ್ದಾರೆ.
ಕ್ರೆಡಿಟ್ ಕಾರ್ಡ್‌ಗಳು, ಇನ್ನಿತರೆ ಕಾರ್ಡ್‌ಗಳನ್ನು ಬಳಸಿ ನಾವು ಅಮೆರಿಕದ ಅಮೆಜಾನ್ ಮೂಲಕವೇ ವಸ್ತು ಕೊಳ್ಳಲು ಸಾಧ್ಯವಿರುವಾಗ ಅಮೆಜಾನ್ ಇಂಡಿಯಾದ ಅವಶ್ಯಕತೆ ಏನಿದೆ?’ ಎಂದು ಸುಬ್ರಹ್ಮಣಿಯನ್ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.
‘ವ್ಯಾಪಾರಸ್ಥರು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗ, ಆದರೆ ಈ ಅಮೆಜಾನ್ ನಮ್ಮ ಸ್ಥಳೀಯ ವ್ಯಾಪಾರಿಗಳನ್ನು ಹಾಳುಮಾಡುತ್ತದೆ, ಅಮೆಜಾನ್ ರೀತಿಯಲ್ಲಿಯೇ ವಾಲ್‌ಮಾರ್ಟ್‌ ಸಹ ಸ್ಥಳೀಯ ವ್ಯಾಪಾರಿಗಳನ್ನು ಹಾಳು ಮಾಡುತ್ತದೆ’ ಎಂದು ಹೇಳಿದ್ದಾರೆ.
ಫ್ಲಿಪ್‌ಕಾರ್ಟ್‌ ಬಗ್ಗೆ ಸುಬ್ರಹ್ಮಣಿಯನ್ ಸ್ವಾಮಿ ಅವರು ಯಾವುದೇ ಕಮೆಂಟ್ ಮಾಡಿಲ್ಲ. ಫ್ಲಿಪ್‌ಕಾರ್ಟ್‌ ಭಾರತದ ಸಂಸ್ಥೆಯಾಗಿದ್ದು, ಬೆಂಗಳೂರಿನದ್ದೇ ಆಗಿದೆ.
ಸುಬ್ರಹ್ಮಣಿಯನ್ ಸ್ವಾಮಿ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೊಸ ಮನವಿ ಮಾಡಿದ್ದು, ಪ್ರಕರಣವನ್ನು ಪ್ರತಿದಿನ ವಿಚಾರಣೆ ನಡೆಸುವಂತೆ ಕೋರಿದ್ದಾರೆ. ಸುಬ್ರಹ್ಮಣಿಯನ್ ಸ್ವಾಮಿ ಅವರ ಮನವಿಯನ್ನು 2020 ಕ್ಕೆ ಪರಿಗಣಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಆರೋಪಿಗಳಾಗಿದ್ದಾರೆ.

Leave a Comment