ಅಮೆಜಾನ್‌ನಲ್ಲಿ ತೆರಕಾಣಲು ಸಜ್ಜಾದ ಚಿತ್ರಗಳು

ಕೊರೊನಾ ಲಾಕ್‌ಡೌನ್‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳವ ಅನಿವಾರ್ಯದಿಂದಾಗಿ ಚಿತ್ರಮಂದರಗಳು ಸದ್ಯಕ್ಕೆ ಬಾಗಿಲು ತೆರುವುದು ಅನುಮಾನ. ಇನ್ನು ಚಿತ್ರಮಂದಿರ ತೆರದರೂ ಪ್ರೇಕ್ಷಕರು ಬರುವುದು ಇನ್ನು ಅನುಮಾನ. ಹಾಗಾಗಿ ಚಿತ್ರಮಂದಿರ ಸುಧಾರಿಸಲು ಇನ್ನು ೧ ವರ್ಷ ಬೇಕಾಗಬಹುದು ಎನ್ನಲಾಗಿದೆ.

ಹಾಗಾದರೆ ಬಿಡುಗಡೆ ಸಿದ್ದವಾಗಿರುವ ಚಿತ್ರದ ಕಥೆ ಏನು, ಸಿನಿಮಾ ಮಾಡಿದ ನಿರ್ಮಾಪಕರ ಕಥೆ ಏನು, ಎಂದು ಯೋಚನೆ ಮಾಡುತ್ತ ಎಂದು ತಲೆಮೇಲೆ ಕೈಹೊತ್ತು  ಕೂತವರಿಗಾಗಿ ಇದೀಗ ಡಿಜಿಟಲ್‌ ವೇದಿಕೆ ಕೈಹಿಡಿಲಿದೆ.ಹೌದು ಕೊರೊನಾ ಕಲಿಸಿದ ಪಾಠವನ್ನು ರೂಡಸಿಕೊಂಡು ಹೋಗುವುದು ಅನಿವಾರ್ಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಮುಂದಿನ ಕೆಲ ಚಿತ್ರಗಳು ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲು ಸಿದ್ದವಾಗಿದೆ.

sufiyum-sujatayum

ಬರುವ ಜೂನ್‌ನಲ್ಲಿ ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಅನೇಕ ಭಾಷೆಯ ಬರೋಬ್ಬರಿ ೭ ಚಿತ್ರಗಳು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗಲಿದೆ. ಅಮಿತಾಭ್‌ಬಚ್ಚನ್‌ಅವರ ‘ಗುಲಾಬೊ ಸೀತಾಬೊ’, ವಿದ್ಯಾಬಾಲನ್‌ನಟನೆಯ ‘ಶಕುಂತಳಾ ದೇವಿ’ ಹಾಗೂ ಕನ್ನಡದ ‘ಲಾ’ ‘ಫ್ರೆಂಚ್‌ಬಿರಿಯಾನಿ’, ತಮಿಳಿನ ‘ಪೊನ್ಮಗಲ್‌ವಂಧಲ್‌‘ ಹಾಗೂ ತಮಿಳು, ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧಗೊಂಡಿರುವ ‘ಪೆಂಗ್ವಿನ್‌’ ಅಮೆಜಾನ್‌ಪ್ರೈಮ್‌ವೀಡಿಯೊದಲ್ಲಿ ನೇರ ಬಿಡುಗಡೆಯಾಗುತ್ತಿರುವ ಚಿತ್ರಗಳು.

ಮೇ 29ರಂದು ‘ಪೊನ್ಮಗಲ್‌ವಂಧಲ್‌’, ಜೂನ್‌19ರಂದು ‘ಪೆಂಗ್ವಿನ್‌’, ಜೂನ್‌26ರಂದು ‘ಲಾ’ ಜೂ. 24ರಂದು ‘ಫ್ರೆಂಚ್‌ಬಿರಿಯಾನಿ’ ಚಿತ್ರಗಳು ಬಿಡುಗಡೆಯಾಗಲಿವೆ. ಇನ್ನುಳಿದಂತೆ ‘ಸುಫಿಯಮ್‌ಸುಜತಾಯಂ’  ‘ಶಕುಂತಳಾ ದೇವಿ’ ಸಿನೆಮಾ ಬಿಡುಗಡೆ ದಿನಾಂಕ ಘೋಷಿಸಿಲ್ಲ. ಅಮಿತಾಬ್‌ಬಚ್ಚನ್‌ಅಭಿನಯದ ‘ಗುಲಾಬೊ ಸೀತಾಬೊ’ ಚಿತ್ರ ಜೂ. 12ರಂದು ಬಿಡುಗಡೆಯಾಗಲಿದೆ.

penguin

ಕನ್ನಡ 2 ಚಿತ್ರಗಳು ಬಿಡುಗಡೆ
ಪುನೀತ್ ರಾಜಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾದ ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.  ಈ ಮೂಲಕ ಡಿಜಿಟಲ್ ಫ್ಲ್ಯಾಟ್ ಫಾರಂನಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಡ್ಯಾನಿಶ್ ಸೇಠ್ ನಾಯಕರಾಗಿದ್ದಾರೆ. ಪನ್ನಗಾ ಭರಣ ಸಿನಿಮಾ ನಿರ್ದೇಶಿಸಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಜುಲೈ 24 ರಂದು ಅಮೆಝೋನ್ ಪ್ರೈಮ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಇನ್ನು, ‘ಲಾ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಜೂನ್ 26 ಕ್ಕೆ ಪ್ರೈಮ್ ನಲ್ಲಿ ಲಭ್ಯವಿರಲಿದೆ.

french-biryani

ಹಲವರ ವಿರೋಧ
ಈಗಾಗಲೇ ಬಾಲಿವುಡ್ ನಲ್ಲಿ ಆಪ್ ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರಮಂದಿರಗಳ ಮಾಲಿಕರಿಂದ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನಲ್ಲೂ ಇದೇ ರೀತಿಯ ಅಸಮಾಧಾನದ ಕೂಗು ಕೇಳಿಬಂದಿತ್ತು. ಆದರೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಇಲ್ಲದೇ ಹೋದಾಗ ಸಿನಿಮಾ ತಂಡಗಳಿಗೂ ಬೇರೆ ದಾರಿಯಿಲ್ಲದಂತಾಗಿದೆ. ಡಿಜಿಟಲ್‌ಫ್ಲಾಟ್‌ಫಾರಂನಲ್ಲಿ ನೇರ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಪಿವಿಆರ್‌ಪಿಕ್ಚರ್ ಸಿಇಓ ಕಮಲ್‌ಜಿಯಾಂಚಂದಾನಿ ಅವರು ಅಸಮಾಧಾನ ಹೊರಹಾಕಿದ್ದಾರೆ.ಕೊರೊನಾ ಹಾವಳಿ ಕಡಿಮೆಯಾದ ಬಳಿಕ  ಜನರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

shakuntala-devi
ವಿದ್ಯಾಬಾಲನ್‌ ಸಂತಸ
ಶಂಕುತಲಾ ದೇವಿ ಖ್ಯಾತ ಗಣಿತಕಾರರು. ಶಕುಂತಲಾ ದೇವಿ ಅವರ ಜೀವನಚರಿತ್ರೆಯಾದ ಹಾಗೂ ವಿದ್ಯಾ ಬಾಲನ್ ಅಭಿನಯದ ಚಿತ್ರ ‘ಶಕುಂತಲಾ ದೇವಿ’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ವಿದ್ಯಾ ಅವರ ಚಿತ್ರ ಮೇ 8 ರಂದು ಬಿಡುಗಡೆಯಾಗಬೇಕಿತ್ತು ಆದರೆ ಕೊರೊನಾ ವೈರಸ್‌ನದಿಂದಾಗಿ ಚಿತ್ರದ ಬಿಡುಗಡೆಯು ಸ್ಥಗಿತಗೊಂಡಿದೆ. ಇನ್ ಸ್ಟಾಗ್ರಾಮ್ ನಲ್ಲಿ ಈ ಮಾಹಿತಿಯನ್ನು ವಿದ್ಯಾ ನೀಡಿದ್ದಾರೆ, “ಶಕುಂತಲಾ ದೇವಿ ಶೀಘ್ರದಲ್ಲೇ ತನ್ನ ಕುಟುಂಬದೊಂದಿಗೆ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು ಎಂದು ಘೋಷಿಸಲು ಸಂತೋಷವಾಗಿದೆ. ಇಂತಹ ಊಹಿಸಲಾಗದ ಸಮಯದಲ್ಲಿ ನಾವು ನಿಮ್ಮನ್ನು ರಂಜಿಸಲು ಸಮರ್ಥರಾಗಿದ್ದೇವೆ ಎಂದು ನಾನು ರೋಮಾಂಚನಗೊಂಡಿದ್ದೇನೆ. ಆದರೆ, ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ” ಎಂದು ತಿಳಿಸಿದ್ದಾರೆ. ಹೊಸ ಗ್ರಾಹಕರು  www.amazon.in/prime ಗೆ ಬೇಟಿ ನೀಡಿ ಚಿತ್ರ ವೀಕ್ಷಿಸಬಹುದು.

Leave a Comment