ಅಮೀರ್‌ಖಾನ್ ಜೊತೆ ಕೆಲಸ ಮಾಡುವ ಇಂಗಿತ

ಬಾಲಿವುಡ್‌ನತ್ತ ಮಾನುಷಿ ಚಿತ್ತ

ಇತ್ತೀಚೆಗಷ್ಟೆ ವಿಶ್ವಸುಂದರಿ ಪಟ್ಟ ಅಲಂಕರಿಸಿದ ಮಾನುಷಿ ಚಿಲ್ಲರ್ ಬಾಲಿವುಡ್ ಅಂಗಳಕ್ಕೆ ಕಾಲಿರಿಸಲು ಮುಂದಾಗಿದ್ದಾರೆ.
ಈ ಹಿಂದೆ ವಿಶ್ವಸುಂದರಿ ಪಟ್ಟ ಅಲಂಕರಿಸಿದ ಸುಶ್ಮಿತಾಸೇನ್, ಐಶ್ವರ್ಯರೈ, ಪ್ರಿಯಾಂಕಾಚೋಪ್ರಾ ಸೇರಿದಂತೆ ಹಲವರು ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಹಿನ್ನೆಲೆಯಲ್ಲಿ ಅದೇ ಹಾದಿಯಲ್ಲಿ ಸಾಗಲು ಮಾನುಷಿ ಚಿಲ್ಲರ್ ಮುಂದಾಗಿದ್ದಾರೆ.
ವಿಶ್ವಸುಂದರಿ ಪಟ್ಟಕ್ಕೂ ಹಾಗೂ ಬಾಲಿವುಡ್‌ಗೂ ಅವಿನಾಭಾವ ಸಂಬಂಧ ಇರುವ ಹಿನ್ನೆಲೆಯಲ್ಲಿ ಬಾಲಿವುಡ್ ಕದ ತಟ್ಟಲು ಮಾನುಷಿ ಮುಂದಾಗಿದ್ದಾರೆ.
ತಮ್ಮ ಆರಂಭದ ಹೆಜ್ಜೆಯನ್ನು ಬಾಲಿವುಡ್‌ನಲ್ಲಿ ಮಿಸ್ಟರ್ ಪರ್ಫೆಕ್ಟನಿಸ್ಟ್ ಎಂದೇ ಕರೆಸಿಕೊಳ್ಳುವ ಅಮೀರ್‌ಖಾನ್ ಜೊತೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಯಾಗಿರುವ ಮಾನುಷಿ ಚಿಲ್ಲರ್, ತಮ್ಮ ಮುಂದಿನ ವೃತ್ತಿಯನ್ನು ಬಾಲಿವುಡ್‌ನಲ್ಲಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ.
ಅಮೀರ್‌ಖಾನ್ ಜೊತೆ ಕೆಲಸ ಮಾಡುವುದರಿಂದ ಚಿತ್ರರಂಗದಲ್ಲಿ ಕಲಿಯಲು ಸಹಕಾರಿಯಾಗಲಿದೆ. ಅಲ್ಲದೆ ಮುಂದಿನ ಭವಿಷ್ಯಕ್ಕೂ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಅಮೀರ್ ಖಾನ್ ಜೊತೆ ಕೆಲಸ ಮಾಡುವ ಆಸೆಯಿದೆ ಎಂದಿದ್ದಾರೆ.
ವಿಶ್ವಸುಂದರಿ ಪಟ್ಟ ಅಲಂಕರಿಸಿದ ಹಲವು ನಟಿಯರು ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ತಾವು ಅದೇ ಹಾದಿಯಲ್ಲಿ ಸಾಗಬೇಕು ಎನ್ನುವ ವಿಶ್ವಾಸವಿದೆ.
ಮೊದಲ ಚಿತ್ರದಲ್ಲಿ ಅಮೀರ್‌ಖಾನ್‌ನೊಂದಿಗೆ ಕೆಲಸ ಮಾಡಿದ ಬಳಿಕ ಬಾಲಿವುಡ್‌ನ ಹಲವು ತಾರಾ ನಟರ ಜೊತೆ ಕೆಲಸ ಮಾಡುವ ಆಸೆಯೂ ಇದೆ ಎಂದಿದ್ದಾರೆ.
ಬಾಲಿವುಡ್‌ನಲ್ಲಿ ಹಲವು ಪ್ರತಿಭಾವಂತ ನಾಯಕಿಯರಿದ್ದಾರೆ. ಅವರುಗಳಲ್ಲಿ ಸಹಜವಾಗಿ ಇಷ್ಟವಾಗುವುದು ಪ್ರಿಯಾಂಕಚೋಪ್ರಾ, ಅದಕ್ಕೆ ಕಾರಣ ಅವರೂ ಕೂಡ ವಿಶ್ವಸುಂದರಿ ಪಟ್ಟ ಅಲಂಕರಿಸಿಯೇ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ ಎನ್ನುವ ಹೆಮ್ಮೆ ಇದೆ ಎನ್ನುವ ಸಮಜಾಯಿಷಿ ಅವರದು.
೧೭ ವರ್ಷಗಳ ಬಳಿಕ ಭಾರತಕ್ಕೆ ವಿಶ್ವಸುಂದರಿ ಪಟ್ಟ ತಂದುಕೊಟ್ಟ ಖುಷಿ ಇದೆ. ಈ ಹಂತದವರೆಗೂ ಬರಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ವಿನಮ್ರಭಾವದಿಂದ ಹೇಳಿದ್ದಾರೆ.

Leave a Comment