ಅಮಿತ್ ಷಾ ನಿತೀಶ್ ಉಪಹಾರ ಕೂಟ

ಪಾಟ್ನಾ,ಜು.೧೨- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಬೆಳಗ್ಗಿನ ಉಪಹಾರ ಕೂಟದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಭೇಟಿಮಾಡಿದ್ದಾರೆ. ಇಬ್ಬರೂ ನಾಯಕರು ತಮ್ಮ

ಭೇಟಿಯವೇಳೆ , ೨೦೧೯ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸದ್ಯದ ರಾಜಕೀಯ ಸ್ಥಿ ಗತಿಗಳ ಕುರಿತು ಚರ್ಚಿಸಿದ್ದಾರೆ ಎಂದು ಅಭಿಪ್ರಾಯ ಪಡಲಾಗಿದೆ. ಮತ್ತೆ ರಾತ್ರಿಯ ಭೋಜನ ಕೂಟದಲ್ಲಿಯೂ ಈ ಇಬ್ಬರೂ ನಾಯಕರು ಭೇಟಿಮಡಿ ಚರ್ಚಿಸಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಡುವೆ ವಿಶಾಲ ತಳಹದಿಯ ಮೇಲೆ ಸೀಟು ಹಂಚಿಕೆ ಕುರಿತಂತೆ ಚರ್ಚಿಸುವುದು ಈ ನಾಯಕರಭೇಟಿಯ ಮುಖ್ಯಉದ್ದೇಶ ಎನ್ನಲಾಗಿದೆ. ಕಾಂಗ್ರೇಸ್ ನೇತೃತ್ವದ ಮಹಾಘಟಭಂದನದಿಂದ ನಿತೀಶ್ ಕುಮಾರ್ ಹೊರಬಂದು ಬಿಜೆಪಿಯೊಂದಿಗೆ ಮತ್ತೆ ಮೈತ್ರಿ ಸರಕಾರ ರಚಿಸಿದ ನಂತರದಲ್ಲಿ ಬಿಹಾರಕ್ಕೆ ಅಮಿತ್ ಷಾರ ಮೊದಲ ಭೇಟಿ ಇದಾಗಿದೆ.
ಇಂದು ಬೆಳಿಗ್ಗೆ ರಾಂಚಿಯಿಂದ ಪಾಟ್ನಾಗೆ ಆಗಮಿಸಿದ ಷಾ ನೇರವಾಗಿ ರಾಜ್ಯ ಅತಿಥಿ ಗೃಹಕ್ಕೆ ತೆರಳಿ ಉಪಹಾರ ಕೂಟದಲ್ಲಿ ಭಾಗವಹಿಸಿದ್ದರು. ಇಡೀದಿನ ಪಾಟ್ನಾ ಭೇಟಿಯಲ್ಲಿರುವ ಷಾ,ಪಕ್ಷದ ಕಾರ್ಯ
ಕರ್ತರನ್ನು ಭೇಟಿಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Leave a Comment