ಅಮಿತ್‌ ಭಂಡಾರಿ ಹಲ್ಲೆ: ಕ್ರಿಕೆಟ್‌ ದಿಗ್ಗಜರು ಆಕ್ರೋಶ

ದೆಹಲಿ, ಫೆ 12 – ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಆಯ್ಕೆ ಸಮಿತಿಯ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ವೇಗಿ ಅಮಿತ್‌ ಭಂಡಾರಿ ಮೇಲೆ ಆಟಗಾರ ಸೇರಿದಂತೆ ಗುಂಪೊಂದು ನಡೆಸಿದ್ದ ಹಲ್ಲೆ ಸಂಬಂಧ ಗೌತಮ್‌ ಗಂಭೀರ್‌ ಸೇರಿದಂತೆ ಇತರೆ ಕ್ರಿಕೆಟ್‌ ದಿಗ್ಗಜರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅನುಜ್‌ ದೇಧಾ ಎಂಬುವವರನ್ನು 23 ವಯೋಮಿತಿ ತಂಡಕ್ಕೆ ಆಯ್ಕೆಗೆ ಪರಿಗಣಿಸಿರಲಿಲ್ಲ. ಈ ಕಾರಣದಿಂದಾಗಿ ಸೋಮವಾರ ಮಧ್ಯಾಹ್ನ ದೆಹಲಿ ಹಿರಿಯರ ತಂಡದ ಅಭ್ಯಾಸ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಏಕಾಏಕಿ ಅಂಗಳಕ್ಕೆ ನುಗ್ಗಿದ ಗುಂಪೊಂದು ಹಾಕಿ ಬ್ಯಾಟ್‌, ರಿವಾಲ್ವರ್‌ ಹಾಗೂ ರಾಡ್‌ಗಳ ಮೂಲಕ ಅಮಿತ್ ಭಂಡಾರಿ ಅವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಿತ್ತು. ಭಂಡಾರಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಟಗಾರ ಅನೂಜ್‌ ಹಾಗೂ ಆತನ ಸಹೋದರ ನರೇಶ್‌ ಬಂಧಿಸಲಾಗಿದೆ.

Leave a Comment