ಅಮಿತಾಭ್ ಜೊತೆ ನಟಿಸಲು ಉತ್ಸುಕರಾಗಿದ್ದಾರೆ ಆಯುಷ್ಮಾನ್

ಮುಂಬೈ, ಜೂನ್ 22 – ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ತಮ್ಮ ಮುಂಬರುವ ಚಿತ್ರದಲ್ಲಿ ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಜೊತೆ ಅಭಿನಯಿಸಲು ತುಂಬಾ ಉತ್ಸುಕರಾಗಿದ್ದಾರೆ.

ಬಾಲಿವುಡ್ ನಿರ್ದೇಶಕ ಶುಜಿತ್ ಸರಕಾರ್ “ಗುಲಾಬೊ” ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಆಯುಷ್ಮಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಇಬ್ಬರೂ ನಟರು ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. “ವಿಕ್ಕಿ ಡೋನರ್” ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ಆಯುಷ್ಮಾನ್, ಶುಜಿತ್ ಸರಕಾರ್ ಜೊತೆ ಮತ್ತೊಮ್ಮೆ ಕೆಲಸ ಮಾಡುತ್ತಿದ್ದಾರೆ. ಆದರೆ, ಅಮಿತಾಭ್ ಬಚ್ಚನ್ ಅವರಂಥ ನಟರ ಜೊತೆ ಅಭಿನಯಿಸುವುದು ಎಲ್ಲಾ ನಟರಿಗೂ ಹೆಮ್ಮೆಯ ಸಂಗತಿ.

ಈ ಕುರಿತು ಮಾತನಾಡಿರುವ ಆಯುಷ್ಮಾನ್, “ನಾನು ಬಚ್ಚನ್ ಸಾಹೇಬರ ಜೊತೆ ಅಭಿನಯಿಸಲು ಉತ್ಸುಕನಾಗಿದ್ದೇನೆ. ಇದೊಂದು ಮಿಶ್ರ ಅನುಭವ. ನನಗೆ ಹೊಟ್ಟೆಯಲ್ಲಿ ಕಚಗುಳಿ ಉಂಟಾಗುತ್ತಿದೆ. ನಾನು ಬಚ್ಚನ್ ಅವರ ಮುಂದೆ ತೆರೆ ಮೇಲೆ ನಿಂತಾಗ ಯಾವ ರೀತಿಯ ಅನುಭವವಾಗಲಿದೆ ಎಂಬುದು ಗೊತ್ತಿಲ್ಲ” ಎಂದು ಹೇಳಿದ್ದಾರೆ.

“ನಾನು ಸಾಕಷ್ಟು ಉತ್ಸುಕನಾಗಿದ್ದೇನೆ. ಏಕೆಂದರೆ ಶುಜಿತ್ ಸರಕಾರ್ ಹಾಗೂ ಜೂಹಿ ಚತುರ್ವೇದಿ ಅವರ ಚಿತ್ರದಲ್ಲಿ ನಟಿಸುವುದೆಂದರೆ ಕನಸು ನನಸಾದ ಹಾಹೆ” ಎಂಬುದು ಆಯುಷ್ಮಾನ್ ಅಭಿಪ್ರಾಯ.

“ಗುಲಾಬೊ ಸಿತಾಬೊ”ದ ಚಿತ್ರೀಕರಣ ಲಖನೌದಲ್ಲಿ ಆರಂಭವಾಗಿದ್ದು, ನವೆಂಬರ್ ತಿಂಗಳಲ್ಲಿ ತೆರೆ ಕಾಣಲಿದೆ.

Leave a Comment