ಅಮಾವಾಸ್ಯೆ ಎಫೆಕ್ಟ್: ಗಜಪಡೆ ತಾಲೀಮಿಗೆ ಬ್ರೇಕ್

ಮೈಸೂರು, ಸೆ.9- ಅಮವಾಸ್ಯೆಯ ಕಾರಣಕ್ಕೆ ಭಾನುವಾರ ದಸರಾ ಗಜಪಡೆಯ ಜಂಬೂಸವಾರಿ ತಾಲೀಮಿಗೆ ವಿರಾಮ ನೀಡಲಾಗಿದೆ. ತಾಲೀಮು ಇಲ್ಲದ ಕಾರಣ, ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ಇಂದು ಫುಲ್ ರಿಲ್ಯಾಲ್ಸ್ ಮೂಡ್‍ನಲ್ಲಿವೆ.
ಅಮವಾಸ್ಯೆ ಸಂದರ್ಭದಲ್ಲಿ ದಸರಾ ಸಂಬಂಧಿತ ಯಾವುದೇ ಚಟುವಟಿಕೆ ನಡೆಯುವುದಿಲ್ಲ. ಇದು ಈ ಹಿಂದಿನ ರಾಜ ಮಹಾರಾಜರ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜಮನೆತನದ ಸಂಪ್ರದಾಯವನ್ನು ಜಿಲ್ಲಾಡಳಿತವೂ ಪಾಲಿಸಿದೆ.

Leave a Comment