ಅಮಾಯಕನ ಬಂಧನ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ, ಸೆ 13- ಕೊಲೆ ಪ್ರಕರಣವೊಂದರಲ್ಲಿ ರಮೇಶ ಕಾಂಬಳೆ ಎಂಬುವವರನ್ನು ಉದ್ದೇಶಪೂರ್ವಕವಾಗಿ ಆರೋಪಿಯನ್ನಾಗಿಸಲಾಗಿದೆ ಎಂದು ಖಂಡಿಸಿ ನಗರದಲ್ಲಿಂದು ಡಾ.ಬಿ. ಆರ್. ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಇದು ಅನ್ಯಾಯದ ಕ್ರಮವೆಂದು ಪ್ರತಿಭಟಿಸಿದರು.
ಕೂಡಲೇ ಈ ಕುರಿತು ಸೂಕ್ತ ಕ್ರಮ ಕೈಕೊಂಡು ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು.
ಸಮಿತಿಯ ರಾಜ್ಯಾಧ್ಯಕ್ಷರಾದ ಮಾರುತಿ ದೊಡಮನಿ, ಧುರೀಣರಾದ ಪಿತಾಂಬ್ರಪ್ಪ ಬಿಳಾರ, ಗುರುನಾಥ ಉಳ್ಳಿಕಾಶಿ, ರವೀಂದ್ರ ಕಲ್ಯಾಣಿ, ಸಿದ್ದಪ್ಪ ಕೌತಾಳ, ಬಾಲಚಂದ್ರ ಸವದತ್ತಿ, ಸತೀಶ ಸಾತಪುತೆ, ಪುಂಡಲೀಕ ಚಲವಾದಿ, ಉಡಚಪ್ಪ ಕಾರಣ್ಯವರ, ಶಂಕರ ಪಾತ್ರದ, ಕಾಶಿನಾಥ, ಬಸವರಾಜ ಚಲವಾದಿ, ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು.

Leave a Comment