ಅಭಿವೃದ್ಧಿ ಪಥದತ್ತ ಸಾಗಲು ಶಿಕ್ಷಣ ಅವಶ್ಯ

ಲಕ್ಷ್ಮೇಶ್ವರ,ಸೆ9-ಸಮಾಜ ಮತ್ತು ದೇಶ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಶಿಕ್ಷಣ ಅವಶ್ಯ ಶಿಕ್ಷಣ ನೀಡುವ ಗುರುಗಳನ್ನು ನೆನದು ಅವರಿಗೆ ಗೌರವ ಸಲ್ಲಿಸುವ ಮೂಲಕ ಗೆಳೆಯರ ಬಳಗ ಉತ್ತಮ ಕಾರ್ಯವನ್ನು ಮಾಡಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀವಿಮಲರೇಣುಕ ವೀರಮುಕ್ತಿಮನಿ ಶಿವಾಚಾರ್ಯರು ಹೇಳಿದರು.
ಅವರು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಭವನದಲ್ಲಿ ಶನಿವಾರ ನೂತನ ಗೆಳೆಯರ ಬಳಗದ ಉದ್ಘಾಟನಾ ಸಮಾರಂಭದ ಹಾಗೂ ಗುರುನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿ ಸಮಾನ ಮನಸ್ಕರ ಗೆಳೆಯರೆಲ್ಲರೂ ಒಗ್ಗೂಡಿ ಸಾಮಾಜಿಕ ಕಳಕಳಿ ಮತ್ತು ಚಿಂತನೆಯೊಂದಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲ್ಪಡುವ ಯೋಜನೆ ಹಮ್ಮಿಕೊಂಡಿರುವ ಗೆಳೆಯರ ಬಳಗ ರಚನಾತ್ಮಕ ಮತ್ತು ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಿಗಿಸಿಕೊಳ್ಳಲಿ ಎಂದು ಹೇಳಿದರು.

 
1977ರ ಎಸ್.ಎಸ್.ಎಲ್.ಸಿ ಗೆಳೆಯರ ಬಳಗದ ಕಾರ್ಯಕ್ರಮವನ್ನು ವೈದ್ಯ ಬಾಬುರಾವ್ ಕುಲಕರ್ಣಿ ಉದ್ಘಾಟಿಸಿ ಮಾತನಾಡಿ ಗುರುಗಳ ಮಾರ್ಗದರ್ಶನವಿಲ್ಲದೇ ಎನನ್ನು ಸಾಧಿಸಲು ಸಾಧ್ಯವಿಲ್ಲ ಗುರಿಯ ಹಿಂದೆ ಗುರುವಿನ ಮಾರ್ಗದರ್ಶನವಿದ್ದರೆ ಗುರಿ ಸಾಧಿಸಲು ಸಾಧ್ಯ. ಗೆಳೆಯರ ಬಳಗದವರು ಕಲಿಸಿದ ಗುರುಗಳಗಳನ್ನು  ಸನ್ಮಾನಿಸಿ ಗುರುವಂದನೆ ನೀಡುತ್ತಿರುವದು ಶ್ಲಾಘನೀಯ ಎಂದರು.
ಗುರುವಂದನಾ ಕಾರ್ಯಕ್ರಮ ಸನ್ಮಾನ ಸ್ವೀಕರಿಸಿ ಮಾತನಾಡಿದ ಎನ್.ವಿ.ಧೂಳಖೇಡ ಅವರು ಗುರು-ಶಿಷ್ಯರ ಸಂಬಂಧ ಅವಿನಾಭಾವ ಸಂಬಂಧವಾಗಿದ್ದು ಇಂದಿನ ದಿನಮಾನಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಬೈದು ಬುದ್ದಿ ಹೇಳುವ ಕಾಲ ದೂರವಾಗಿದೆ ಹಿಂದಿನ ಕಾಲದಲ್ಲಿ ಛಡಿ ಚಮ್ಮಚಮ್ಮ ವಿದ್ಯೆ ಗಮ್ಮಗಮ್ಮ ಎನ್ನುವಂತಿತ್ತು ಆದರೆ ಈಗ ಪರಿಸ್ಥಿತಿ ಬದಲಾಗಿದೆ.ಆದರೆ 1977ರಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲರೂ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿತ್ತಿರುವದು ನಮಗೆ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಫ್.ಸಿ.ಸವಣೂರು, ಎಂ.ಎಸ್.ಬಡಿಗೇರ, ಆರ್.ಕೆ.ಕುಲಕರ್ಣಿ, ಸಿ.ಎಫ್.ಬೂದಿಹಾಳ, ಎಸ್.ಸಿ.ಸಂಶಿ, ಜಿ.ಕೆ.ಕುಲಕರ್ಣಿ, ಎಸ್.ಜೆ.ಹಿರೇಮಠ, ಎಂ.ಎ.ಖಾಜಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಳೆಮಲ್ಲಿಕಾರ್ಜುನಸ್ವಾಮಿಗಳು, ಮಾಜಿ ಶಾಸಕರಾದ ಜಿ.ಎಂ.ಮಹಾಂತಶೆಟ್ಟರ, ಜಿ.ಎಸ್.ಗಡ್ಡದೇವರಮಠ, ಗೆಳೆಯರ ಬಳಗದ ಅಧ್ಯಕ್ಷ ವಿಜಯ ಮಹಾಂತಶೆಟ್ಟರ ಸೇರಿದಂತೆ ಗೆಳೆಯರ ಬಳಗದ ಪದಾಧಿಕಾರಿಗಳು ಇದ್ದರು.
ಈರಯ್ಯ ಹೊಸಮಠ, ವಂದನಾ ಮಾತಾಡೆ, ಅರಣಾಚಲಶಿವ ಮಠದ ಕಾರ್ಯಕ್ರಮ ನಿರ್ವಹಿಸಿದರು

Leave a Comment