ಅಭಿವೃದ್ಧಿಕಾಮಗಾರಿಗೆ ನರೇಂದ್ರ ಭೂಮಿ ಪೂಜೆ

ಹನೂರು: ಫೆ.7- ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆರ್.ನರೇಂದ್ರ ಇಂದು ಬೆಳಿಗ್ಗೆ ಭೂಮಿ ಪೂಜೆ ನೆರವೇರಿಸಿದರು.
ಎಸ್.ಎಫ್.ಸಿ. 2018-19 ರ ಪ್ಯಾಕೇಜ್ (3) ಅನುದಾನದಲ್ಲಿ ಪ.ಪಂ. ವ್ಯಾಪ್ತಿಯ 9 ನೇ ವಾರ್ಡ್‍ನಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಹಾಗೂ 6 ನೇ ವಾರ್ಡ್‍ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು, ವಾರ್ಡ್ ನಂ 8ರ ವ್ಯಾಪ್ತಿಯ ಸ್ಮಶಾನ ಮಧ್ಯೆರಸ್ತೆ ನಿರ್ಮಾಣ ಕಾಮಗಾರಿ, 9 ನೇ ವಾರ್ಡ್‍ನ ಮಾರುತಿಚಿತ್ರಮಂದಿರ ಮುಂಭಾಗದಿಂದ ಜಯರಾಮೇಗೌಡ ಮನೆಯವರೆಗೆ ಚರಂಡಿ ಮತ್ತುರಸ್ತೆ ನಿರ್ಮಾಣ, 4ನೇ ವಾರ್ಡ್‍ನಗುಂಡಯ್ಯನ ಮನೆಯಿಂದ ಮ.ಮ.ಬೆಟ್ಟ ಮುಖ್ಯ ರಸ್ತೆ ಬೇಕರಿವರೆಗೆ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ಒಟ್ಟು 51.27 ಲಕ್ಷ ರೂ.ಗಳ ವೆಚ್ಚದ 935 ಮೀಟರ್‍ಕಾಂಕ್ರಿಟ್ ರಸ್ತೆ ಮತ್ತು 341 ಮೀಟರ್‍ಕಾಂಕ್ರಿಟ್ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಸಲ್ಲಿಸದ ಅವರು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತನ್ನು ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಜವಾದ್‍ಅಹಮ್ಮದ್, ಪ.ಪಂ.ಮುಖ್ಯಾಧಿಕಾರಿ ಮೂರ್ತಿ, ಇಂಜಿನಿಯರ್ ಶಿವಶಂಕರ ಆರಾಧ್ಯ, ಸದಸ್ಯರಾದ ಹರೀಶ್‍ಕುಮಾರ್, ಆನಂದ್‍ಕುಮಾರ್, ಸಂಪತ್‍ಕುಮಾರ್, ಗಿರೀಶ್, ಮುಖಂಡರುಗಳಾದ ಚಿಕ್ಕತಮ್ಮಯ್ಯ, ರಾಜಣ್ಣ, ವೆಂಕಟೇಶ್ ಇನ್ನಿತರರು ಇದ್ದರು.

Leave a Comment