ಅಭಿಮಾನಿ ಮೇಲೆ ಹಿಟ್‌ಮ್ಯಾನ್ ಗರಂ

 

ಮುಂಬೈ, ಏ 2- ಕೊರೊನಾ ವೈರಸ್‌ನಿಂದ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಮನೆಯಲ್ಲಿ ಕಾಲಕಳೆಯುತ್ತಿರುವ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯೆರಾಗಿ ಕಾಲ ಕಳೆಯುತ್ತಿದ್ದಾರೆ. ಆ ವೇಳೆ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅಭಿಯಾನಿಯೊಬ್ಬರ ಮೇಲೆ ಗರಂ ಆದ ಘಟನೆ ನಡೆದಿದೆ.

ರೋಹಿತ್ ಶರ್ಮಾ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಮಾತನಾಡುವಾಗ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಅಭಿಮಾನಿಯೊಬ್ಬ ಇಂಗ್ಲಿಷ್ ನಲ್ಲಿ ಮಾತನಾಡಿ ಎಂದಿದ್ದು ಇದಕ್ಕೆ ರೋಹಿತ್ ತಿರುಗೇಟು ಕೊಟ್ಟಿದ್ದಾರೆ.
ಜಸ್ಪ್ರೀತ್ ಬುಮ್ರಾ ಜತೆಗೆ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಬಂದ ರೋಹಿತ್ ಹಿಂದಿಯಲ್ಲೇ ಮಾತನಾಡುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಪದೇ ಪದೇ ಇಂಗ್ಲಿಷ್ ನಲ್ಲಿ ಮಾತನಾಡಿ ಎಂದಿದ್ದು ರೋಹಿತ್ ಗೆ ಅಸಮಾಧಾನವುಂಟು ಮಾಡಿತ್ತು.

ಇದಕ್ಕೆ ಕೊಂಚ ಅಸಹನೆಯಿಂದಲೇ ತಿರುಗೇಟು ಕೊಟ್ಟ ರೋಹಿತ್, ’ನಾವು ಭಾರತೀಯರು, ಟಿವಿ ಸಂದರ್ಶನದಲ್ಲೂ ಹಿಂದಿಯಲ್ಲೇ ಮಾತಾಡ್ತೀವಿ. ಹೀಗಿರುವಾಗ ಈಗ ಮನೆಯಲ್ಲಿರುವಾಗ ಹಿಂದಿಯನ್ನೇ ಮಾತನಾಡೋದು ಎಂದಿದ್ದಾರೆ. ಲಾಕ್‌ಡೌನ್ ವೇಳೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೋಹಿತ್ ಶರ್ಮಾ ಹಾಗೂ ಜಸ್‌ಪ್ರೀತ್ ಬುಮ್ರಾ ಲೈವ್ ಬಂದು ಮಾತುಕತೆ ನಡೆಸಿದ್ದಾರೆ. ಆಗ ಅಭಿಮಾನಿಯೊಬ್ಬ ಪದೇ ಪದೇ ಇಂಗ್ಲೀಷ್‌ನಲ್ಲಿ ಮಾತನಾಡುವಂತೆ ಹೇಳಿದ್ದಾನೆ.

ಇದ್ದರಿಂದ ಬೇಸರಗೊಂಡ ರೋಹಿತ್ ಸದ್ಯ ನಾನು ಮನೆಯಲ್ಲಿದ್ದೇನೆ. ಇಲ್ಲಿ ನಾವು ಭಾರತೀಯರು, ಹೀಗಾಗಿ ಇಂಗ್ಲಿಷ್‌ನಲ್ಲಿ ಮಾತನಾಡುವುದಿಲ್ಲ, ಹಿಂದಿಯಲ್ಲೇ ಮಾತನಾಡುತ್ತೇನೆ ಎಂದು ಖಡಕ್ ಉತ್ತರ ನೀಡಿದ್ದಾರೆ. ಇದಕ್ಕೆ ಬುಮ್ರಾ ಕೂಡ ಪ್ರತಿಕ್ರಿಯಿಸಿ ಇಂಗ್ಲಿಷ್ ಭಾಷೆ ಮಾತನಾಡಿದರೆ ಕೆಲವರು ಹಿಂದಿಯಲ್ಲಿ ಮಾತನಾಡಿ ಎಂದು ಹೇಳುತ್ತಾರೆ. ಯಾವುದೇ ಗೊಂದಲಬೇಡವೆಂದು ಮಾತೃ ಭಾಷೆಯಾದ ಹಿಂದಿಯಲ್ಲೆ ಮಾತನಾಡುತ್ತೇವೆ ಎಂದಿದ್ದಾರೆ. ಜೊತೆಗೆ ಕೊರೊನಾ ವಿರುದ್ಧ ಹೋರಾಣ ಮನೆಯಲ್ಲಿರಿ ಸುರಕ್ಷಿತವಾಗಿರಿ ಎಂದು ಕರೆ ನೀಡಿದ್ದಾರೆ.

Leave a Comment