ಅಭಯ ಹಸ್ತ ಪೂರ್ಣ

ಹೊಸಬರ ತಂಡದ ’ಅಭಯ ಹಸ್ತ’ ಚಿತ್ರ ಪೂರ್ಣಗೊಂಡಿದ್ದು ಬಿಡುಗಡೆಗೆ ಸಜ್ಜಾಗಿದೆ.  ಇತ್ತೀಚೆಗೆ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನಡೆಯಿತು. ಹಿರಿಯ ನಿರ್ದೇಶಕರಾದ ಎಸ್.ಕೆ ಭಗವಾನ್,ಓಂ ಸಾಯಿ ಪ್ರಕಾಶ್, ಪ್ರದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡ,ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಮತ್ತಿತರು ಆಗಮಿಸಿ ಚಿತ್ರ ತಂಡಕ್ಕೆ ಶುಭಕೋರಿದರು. ಹೊಸಬರ ತಂಡಕ್ಕೆ ಬೆನ್ನಲುಬಾಗಿ ಹಿರಿಯ ನಟ ಶಿವರಾಜ್ ಕುಮಾರ್ ಹಾಡೊಂದನ್ನು ಹಾಡುವ ಮೂಲಕ ಕೈಜೋಡಿಸಿದ್ದಾರೆ.

ಚಿತ್ರಕ್ಕೆ ಮೊದಲು ಹಸ್ತ ಎಂದು ಹೆಸರಿಡಲಾಗಿತ್ತು. ಅದು ಸೂಕ್ಷ್ಮ ವಿಷಯವಾದ ಹಿನ್ನೆಲೆಯಲ್ಲ ಹೆಸರು ಬದಲಾಯಿಸುವಂತೆ ನಾನೇ ತಂಡಕ್ಕೆ ಹೇಳಿದೆ.ಅದರಂತೆ ಅಭಯ ಹಸ್ತ ಎಂದು ಹೆಸರಿಡಲಾಗಿದೆ ಎಂದು ಮಾತಿಗಿಳಿದರು ಹಿರಿಯ ಸಾಹಿತಿ ದೊಡ್ಡರಂಗೇಗೌಡ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಭಿನ್ನವಾಗಿ ಮೂಡಿ ಬಂದಿದೆ ಎಲ್ಲರ ಸಹಕಾರಬೇಕು ಎಂದು ಕೇಳಿಕೊಂಡರು.

ನಿರ್ದೇಶಕ ನವೀನ್  ಮಾತನಾಡಿ, ಚಿತ್ರದಲ್ಲಿ ದಿವಂಗತ ನಟ ಕಾಶೀನಾಥ್ ಕಾಣಿಸಿಕೊಂಡಿದ್ದಾರೆ.ಚಿತ್ರದಲ್ಲಿ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಡಿಸಿಡುವ ಪ್ರಯತ್ನ ಮಾಡಿದ್ದೇವೆ. ಐಟಂ ಹಾಡಿದೆ. ೪೫ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿಕೊಂಡರು.ಕಾರ್ತಿಕ್ ವೆಂಕಟೇಶ್ ಚಿತ್ರದಲ್ಲಿ ನಾಲ್ಕು ಹಾಡಿಗೆ ಸಂಗೀತ ನೀಡಿದ್ದಾರೆ.

ನಟ ಅನಿರುದ್ ಮಾತನಾಡಿ, ಅಭಯ ಹಸ್ತ ಚಿತ್ರ ಯಶಸ್ವಿಯಾಗಲಿ ಎಂದು ಹರಸಿ ಹಾರೈಸಿದರು.ಚಿತ್ರದಲ್ಲಿ ರಂಜನ್, ಪೂಜಾ, ಮಂಜು ಸೇರಿದಂತೆ ಮತ್ತಿತರ ಕಲಾವಿದರ ದಂಡು ಚಿತ್ರದಲ್ಲಿದೆ.

Leave a Comment