ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ

ಚಳ್ಳಕೆರೆ.ಫೆ.12; ರಾಷ್ಟ್ರೀಯ ಮಟ್ಟದಲ್ಲಿ ಅಬಾಕಸ್ ಪಂದ್ಯಾದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಇಲ್ಲಿನ ಚಿಗುರು ಇ-ಕೀಡ್ಸ್ ಪ್ರೀ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿಜೇತ ಸ್ಪರ್ಧಿಗಳಿಗೆ ಆರ್ಹತಾ ಪತ್ರ ಮತ್ತು ಪ್ರಶಸ್ತಿ ನೀಡಿ ಮಾತನಾಡಿದ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಜಿ.ವಿ.ರಾಜಣ್ಣ, ಚಳ್ಳಕೆರೆ ಇತಿಹಾಸದಲ್ಲಿ ಈ ದಿನ ಅತ್ಯಂತ ಮಹತ್ವದ ದಿನವಾಗಿದೆ. ವರ್ಷಗಳಲ್ಲೂ ಸಹ ಇಲ್ಲಿಯ ಅಬಾಕಸ್ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲೂ ಗೆಲವು ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಬಾಕಸ್ ನಿರ್ದೇಶಕ ರಾಘವೇಂದ್ರ, ಚೆನ್ನೈನಲ್ಲಿ ನಡೆದ ಅಬಾಕಸ್ ಸ್ಪರ್ಧೆಯಲ್ಲಿ ಚಿಗುರು ಅಕಾಡೆಮೆಯ ನೇಹ, ಮೇಘನಾ, ಸಿ.ಬಿ.ದಿವ್ಯ, ವಿ.ಮಂಜುನಾಥ, ಕೌಶಿಕ್, ಆಕಾಂಕ್ಷ, ರಿತ್ವಿಕ್ ಎಸ್.ನಾಯ್ಕ್, ಪ್ರೀತು ಪಿ.ಸಜ್ಜನ್ ದ್ವಿತೀಯ ಸ್ಥಾನ ಪಡೆದರೆ. ಕಿಶೋರ್, ಶಶಾಂಕ್, ಪ್ರಜ್ವಲ್, ಜಯಶ್ರೀ, ಹರ್ಷಸಂಕೋಲ್, ಸಂದೇಶ್, ತನಯ್, ನೇಹರೆಡ್ಡಿ, ಗಾಯನಶ್ರೀ ತೃತೀಯ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಅರುಣಾ, ವೀರೇಶ್, ವೀರಸಂಗೋಳ್ಳಿರಾಯಣ್ಣ ಯುವ ಸೇನೆಯ ಅಧ್ಯಕ್ಷ ಸೂರನಹಳ್ಳಿ ಕೆ.ಜಗದೀಶ್, ಪೋಷಕರ ಪರವಾಗಿ ಮಾತನಾಡಿದ ಡಾ.ರಾಘವೇಂದ್ರ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಜಯಲಕ್ಷ್ಮಿ, ಶಿಕ್ಷಕ ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

Leave a Comment