ಅಫ್ಘಾನಿಸ್ತಾನ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ತಂಡ ಪ್ರಕಟ

ನವದೆಹಲಿ, ಅ 16 – ಮುಂದಿನ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಕಳೆದ ಕೆರಿಬಿಯನ್ ಲೀಗ್‍ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಹಲವು ಆಟಗಾರರಿಗೆ ಅವಕಾಶ ನೀಡಲಾಗಿದೆ.

ನವೆಂಬರ್ 5 ರಿಂದ ಡಿಸೆಂಬರ್ 1 ರವರೆಗೆ ಭಾರತದ ಡೆಹ್ರಾಡೂನ್‍ನಲ್ಲಿ ಅಫ್ಘಾನಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ ಮೂರು ಟಿ-20, ಮೂರು ಏಕದಿನ ಹಾಗೂ ಏಕೈಕ ಟೆಸ್ಟ್ ಪಂದ್ಯ ಆಡಲಿದೆ. ಕಳೆದ ಹಲವು ದಿನಗಳ ಹಿಂದೆಯೇ ಸ್ಟಾರ್ ಆಲ್‍ರೌಂಡರ್ ಕಿರೋನ್ ಪೊಲಾರ್ಡ್ ಅವರನ್ನು ಸೀಮಿತ ಓವರ್‍ಗಳ ತಂಡಕ್ಕೆ ನಾಯಕನಾಗಿ ಪಟ್ಟಾಭಿಷೇಕ ಮಾಡಲಾಗಿದೆ. ಏಕೈಕ ಟೆಸ್ಟ್ ಪಂದ್ಯದಲ್ಲಿ ಜೇಸನ್ ಹೋಲ್ಡರ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಮೂರು ಮಾದರಿಯಲ್ಲಿ ಜೇಸನ್ ಹೋಲ್ಡರ್ ಸ್ಥಾನ ಪಡೆದಿರುವುದು ವಿಶೇಷ.

ಸ್ಟಾರ್ ಆಲ್‍ರೌಂಡರ್ ರಸೆಲ್ ಹಾಗೂ ಕ್ರಿಸ್ ಗೇಲ್ ಅವರು ಸೀಮಿತ ಓವರ್ ಮಾದರಿಗೆ ಗೈರಾಗಲಿದ್ದಾರೆ. ಡೆರೆನ್ ಬ್ರಾವೊ ಹಾಗೂ ವೇಗೊ ಶನ್ನೋನ್ ಗ್ಯಾಬ್ರಿಯಲ್ ಅವರು ಏಕೈಕ ಟೆಸ್ಟ್ ಆಯ್ಕೆಗೆ ಅಲಭ್ಯರಾಗಿದ್ದಾರೆ.

ಟಿ-20: ಕಿರೋನ್ ಪೊಲಾರ್ಡ್(ನಾಯಕ), ಶಾಯ್ ಹೋಪ್, ಎವಿನ್ ಲೆವಿಸ್, ಶಿಮ್ರಾನ್ ಹೆಟ್ಮೇರ್, ಋಥ್‍ಫರ್ಡ್, ಬ್ರೆಂಡನ್ ಕಿಂಗ್, ಫ್ಯಾಬಿಯನ್ ಅಲ್ಲೆನ್, ಜೇಸನ್ ಹೋಲ್ಡರ್, ಹೇಡನ್ ವಾಲ್ಷ್, ಸಿಮೋನ್ಸ್, ಖಾರಿ ಪಿಯರಿ, ಶೆಲ್ಡನ್ ಕಾಟ್ರೆಲ್, ದಿನೇಶ್ ರಾಮ್ದಿನ್, ಕೆರ್ಸಿಕ್ ವಿಲಿಯಮ್ಸ್, ಅಲ್ಜಾರಿ ಜೇಸೆಫ್.

ಏಕದಿನ: ಕಿರೋನ್ ಪೊಲಾರ್ಡ್(ನಾಯಕ), ಶಾಯ್ ಹೋಪ್, ಎವಿನ್ ಲೆವಿಸ್, ಶಿಮ್ರಾನ್ ಹೆಟ್ಮೇರ್, ಸುನೀಲ್ ಅಂಬ್ರೀಸ್, ನಿಕೋಲಸ್ ಪೂರನ್, ಬೆಂಡನ್ ಕಿಂಗ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಹೇಡನ್ ವಾಲ್ಷ್, ಖಾರಿ ಪಿಯರಿ, ಶೆಲ್ಡನ್ ಕಾಟ್ರೆಲ್, ಕಿಮೋ ಪಾಲ್, ಅಲ್ಜಾರಿ ಜೇಸೆಫ್, ರೋಮೇರಿಯೊ ಶೆಫರ್ಡ್.

ಟೆಸ್ಟ್: ಜೇಸನ್ ಹೋಲ್ಡರ್ (ನಾಯಕ), ಶಾಯ್ ಹೋಪ್, ಜಾನ್ ಕಾಟ್ರೆಲ್, ಕ್ರೈಗ್ ಬ್ರಾಥ್‍ವೇಟ್, ಶಿಮ್ರಾನ್ ಹೆಟ್ಮೇರ್, ಬ್ರೂಕ್ಸ್, ರೋಸ್ಟನ್ ಚೇಸ್, ಶೇನ್ ಡೌರಿಚ್, ಸುನೀಲ್ ಅಂಬ್ರೀಸ್, ಜೊಮೆಲ್ ವಾರಿಕನ್, ರಕೀಮ್ ಕಾರ್ನ್‍ವಾಲ್, ಕೇಮರ್ ರೋಚ್, ಕಿಮೋ ಪಾಲ್, ಅಲ್ಜಾರಿ ಜೊಸೆಫ್.

Leave a Comment