ಅಫ್ಘಾನಿಸ್ತಾನದಲ್ಲಿ ಹೊರದಬ್ಬುವ ಕಾರ್ಯಾಚರಣೆ: ಕನಿಷ್ಠ 19 ಉಗ್ರರು ಹತ

 ತಲುಕ್ವಾನ್‍, ಜೂ 13 – ಅಫ್ಘಾನಿಸ್ತಾನದ ಉತ್ತರ ಭಾಗದ ತಾಖಾರ್ ಪ್ರಾಂತ್ಯದ ಖ್ವಾಜಾ ಘರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಹೊರದಬ್ಬುವ ಕಾರ್ಯಾಚರಣೆಯಲ್ಲಿ ಕನಿಷ್ಠ 19 ಉಗ್ರರು ಹತರಾಗಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಗುರುವಾರ ಸೇನಾ ಹೇಳಿಕೆ ತಿಳಿಸಿದೆ.

ವಾರಾಂತ್ಯದಲ್ಲಿ ಖ್ವಾಜಾ ಘರ್ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರರು ಭಾರಿ ಆಕ್ರಮಣವನ್ನು ನಡೆಸಿ, ಜಿಲ್ಲೆಯ ಹಲವು ಭಾಗಗಳನ್ನು ಆಕ್ರಮಿಸಿಕೊಂಡಿತ್ತು. ಅಲ್ಲದೆ, ಕೆಲವು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿತ್ತು.

  ಈ ಹಿನ್ನೆಲೆಯಲ್ಲಿ ಉಗ್ರರನ್ನು ಹೊರದಬ್ಬಲು ಹಾಗೂ ಶಾಂತಿ-ಸುವ್ಯವಸ್ಥೆ ಸಾಮಾನ್ಯ ಸ್ಥಿತಿಗೆ ತರಲು ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದವು. ಕಾರ್ಯಾಚರಣೆಯಿಂದ ಪ್ರಮುಖ ಭಾಗಗಳಲ್ಲಿ ಉಗ್ರರು ಪಲಾಯನಗೈದಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

  ಈ ಪ್ರದೇಶದಲ್ಲಿ  ಉಗ್ರರನ್ನು ಸಂಪೂರ್ಣವಾಗಿ ಹೊರದಬ್ಬುವವರೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸೇನೆ ತಿಳಿಸಿದೆ.

 ತಾಲಿಬಾನ್ ಉಗ್ರರು ಈ ಕುರಿತು ಇದುವರೆಗೆ ಪ್ರತಿಕ್ರಿಯಿಸಿಲ್ಲ.

Leave a Comment