ಅಫಘಾನಿಸ್ತಾನ: ವಿಶೇಷ ಪಡೆಯಿಂದ 6 ಉಗ್ರರ ಬಲಿ

ಕಾಬೂಲ್, ಏ 16 – ಅಫಘಾನಿಸ್ತಾನದ ವಿಶೇಷ ಸೇನಾಪಡೆ ತಾಲಿಬಾನ್ ಅಡಗುದಾಣದ ಮೇಲೆ ನಡೆಸಿದ ದಾಳಿಯಲ್ಲಿ 6 ಉಗ್ರರು ಹತರಾಗಿದ್ದು, 9 ಮಂದಿಯನ್ನು ಬಂಧಿಸಲಾಗಿದೆ ಎಂದು ಅಫ್ಘನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

“ವಿಶೇಷ ಸೇನಾಪಡೆಯು ಸಿಬ್ಬಂದಿ ಕುಂದುಝ ನಗರದ ಹೊರವಲಯದಲ್ಲಿ ಕಾಯಾಚರಣೆ ನಡೆಸಿದ ಸಂದರ್ಭದಲ್ಲಿ ಉಗ್ರರಿಂದ ಗುಂಡಿನ ಸ್ವಾಗತ ದೊರೆಯಿತು.  ಇದಕ್ಕೆ ಪ್ರತಿಯಾಗಿ ಯೋಧರು ಹಾರಿಸಿದ ಗುಂಡಿಗೆ 6 ಮಂದಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ” ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಉಗ್ರರ ಅಡಗುದಾಣದಲ್ಲಿದ್ದ ಒಂದು ವಾಹನ, ರಾಕೆಟ್ ಮತ್ತಿತರ ಸ್ಪೋಟಕಗಳನ್ನು ನಾಶಗೊಳಿಸಲಾಗಿದೆ.  ಗುಂಡಿನ ಚಕಮಕಿಯಲ್ಲಿ ಸೇನಾಪಡೆಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ತಾಲಿಬಾನ್ ಸಂಘಟನೆಯ ಭಯೋತ್ಪಾದಕರು ಸೋಮವಾರವೂ ಸಹ ನೆರೆಯ ಟಖರ್ ಪ್ರಾಂತದ ಅಫಘಾನಿಸ್ತಾನ ಗಡಿ ರೇಖೆಯ ಬಳಿ ದಾಳಿ ನಡೆಸಿದ್ದು, ಯೋಧರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ ಎನ್ನಲಾಗಿದೆ

 

Leave a Comment