ಅಪ್ರಾಪ್ತ ಬಾಲಕನಿಗೆ ಹಿಂಸೆ ನೀಡಿದ ಯುವಕರು

ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಇರುವ ಕೆರೆಗೆ ಅಪ್ರಾಪ್ತ ಬಾಲಕನನ್ನು ತಳ್ಳಿ ದೈಹಿಕ ಹಿಂಸೆ ನೀಡಿದ ಅಮಾನವೀಯ ಘಟನೆ ನಡೆದಿದೆ‌. ಮೂರು ಜನ ಯುವಕರ ತಂಡ ನನಗೆ ಈಜು ಬರಲ್ಲ ಎಂದು ಅಪ್ರಾಪ್ತ ಬಾಲಕ ಕಿರುಚಾಡುತ್ತಿದ್ದರೂ ಬಿಡದೇ ನೀರಿನಲ್ಲಿ ಮುಳುಗಿಸಿ ಬಾಲಕನಿಗೆ ಹಿಂಸೆ ನೀಡಿದ್ದಾರೆ. ಜೊತೆಗೆ ಅವಾಚ್ಯ ಶಬ್ದಗಳಿಂದ ಈ ಬಾಲಕನಿಗೆ ಬೈದಿದ್ದಾರೆ.

ಮ್ಯಾನುಯಲ್, ಸೂರ್ಯ, ಚರಣ್ ಎಂಬ ಮೂರು ಜನ ಯುವಕರು ಅಪ್ರಾಪ್ತ ಬಾಲಕನನ್ನು ನೀರಿಗೆ ತಳ್ಳಿದ್ದಾರೆ. ಆ ಬಾಲಕ ಕಿರುಚಾಡಿದರೂ ಕರುಣೆ ತೋರದೆ ನೀರಿನಲ್ಲಿಯೇ ದೈಹಿಕ ಹಿಂಸೆ ಮಾಡಿದ್ದಾರೆ.

ಇನ್ನು ಈ ಘಟನೆಯನ್ನು ಅವರೇ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇನ್ನು ಈ ಮೂರು ಜನ ಯುವಕರ ವಿರುದ್ಧ ಸಂಪಂಗಿರಾಮ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment