ಅಪ್ರಾಪ್ತೆ ಮೇಲೆ ಅತ್ಯಾಚಾರ

ಶಹಜಹಾನ್‌ಪುರ(ಉ.ಪ್ರ),ಆ.೨೩- ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಕಾಮುಕರಿಬ್ಬರು ಹಲವು ಬಾರಿ ಅತ್ಯಚಾರಗೈದ ಘಟನೆ ಮಕಂದಪುರ ಗ್ರಾಮದಲ್ಲಿ ನಡೆದಿದೆ.

ಶಾಲೆಗೆ ಹೋಗುತ್ತಿದ್ದ ೧೩ ವರ್ಷದ ಬಾಲಕಿಯನ್ನು ಆ.೧೪ರಂದು ಅಜಯ್, ಕಮಲೇಶ್ ಎಂಬ ಆರೋಪಿಗಳು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಆ.೨೧ರ ತಡರಾತ್ರಿ ಬಾಲಕಿ ಸ್ಥಳದಿಂದ ಪಲಾಯನವಾಗುವಲ್ಲಿ ಯಶಸ್ವಿಯಾಗಿದ್ದಾಳೆ. ಸಂತ್ರಸ್ತೆಯ ತಾಯಿ ನೀಡಿರುವ ದೂರಿನನ್ವಯ ಪೊಲೀಸರ ಪ್ರಕರಣ ದಾಖಲಿಸಿದ್ದು, ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment