ಅಪ್ಪ-ಮಗಳ ಬಾಂಧವ್ಯ, ಸಾಮಾಜಿಕ ಕಳಕಳಿ ಅನಾರವರಣ

* ಚಿಕ್ಕನೆಟಕುಂಟೆ ಜಿ.ರಮೇಶ್

ವಿಭಿನ್ನ ಶೀರ್ಷಿಕೆಗಳನ್ನಿಟ್ಟುಕೊಂಡು ಬಣ್ಣದ ಬದುಕಿನಲ್ಲಿ ಅದೃಷ್ಟ ಕಂಡುಕೊಳ್ಳಲು ಪ್ರತಿಭಾವಂತರ ತಂಡ ಒಬ್ಬರ ಹಿಂದೆ ಒಬ್ಬರಂತೆ ಗಾಂಧಿನಗರಕ್ಕೆ ಆಗಮಿಸುತ್ತಿದೆ. ಅದರಲ್ಲಿ ಕೆಲವರು ಯಶಸ್ವಿಯಗುತ್ತಾರೆ ಮತ್ತೆ ಕೆಲವರು ಬಂದ ದಾರಿಗೆ ಸುಂಕವಿಲ್ಲದೆ ವಾಪಾಸಾಗುತ್ತಾರೆ.

ಮಾಡುವ ಕೆಲಸದಲ್ಲಿ ಶ್ರದ್ಧೆ, ನಂಬಿಕೆ, ಉತ್ತಮ ಕಥೆ,ಅದಕ್ಕೊಪ್ಪುವ ಪಾತ್ರವರ್ಗದೊಂದಿಗೆ ಶ್ರಮಹಾಕಿದ ಮಂದಿಯ ಪರಿಶ್ರಮ ಎಂದೂ ಕೈಕೊಡುವುದಿಲ್ಲ.ಅದರ ಸಾಲಿಗೆ ನಮ್ ಜಗದೀಶ್ ಕೂಡ ಸೇರ್ಪಡೆ.

’ಥರ್ಡ್ ಕ್ಲಾಸ್’ ಚಿತ್ರದ ಮೂಲಕ ಜಗದೀಶ್ ಚಿತ್ರರಂಗದಲ್ಲಿ ನಾಯಕನಾಗಿ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಳ್ಳಲು ಆರಂಭದ ಹೆಜ್ಜೆ ಇಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಅಡಿ ಬರಹದಲ್ಲಿ ಹಣೆಬರಹಕ್ಕೆ ಹೊಣೆ ಯಾರು ಎನ್ನುವ ಉಪಶೀರ್ಷಿಕೆ ಇಟ್ಟಿದ್ದಾರೆ.

ಮೂರು ವಿಧದ ಜೀವನ ಶೈಲಿಯನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ಮಾಪಕರು. ಜಗದೀಶ್‌ಗೆ ನಾಯಕಿಯಾಗಿ ರೂಪಿಕಾ ಕಾಣಿಸಿಕೊಂಡಿದ್ದಾರೆ. ಅಶೋಕ್ ದೇವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರ ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ರಾಜ್ಯಾದ್ಯಂತ ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಟ್ರೈಲರ್ ಮತ್ತು ಹಾಡುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಸಾಮಾಜಿಕ ಕಳಕಳಿಯ ಜೊತೆಗೆ ಕಾಮಿಡಿ ಮತ್ತು ಫ್ಯಾಮಿಲಿ ಎಂಟಟೈನ್‌ಮೆಂಟ್ ಅಂಶಗಳು ಚಿತ್ರದಲ್ಲಿವೆ. ಅಪ್ಪ-ಮಗಳ ಸೆಂಟಿಮೆಂಟ್ ಚಿತ್ರದ ಹೈಲೈಟ್. ಹೆಸರಿಗಷ್ಟೇ ಥರ್ಡ್ ಕ್ಲಾಸ್ ,ಚಿತ್ರ ಪಕ್ಕಾ ಫಸ್ಟ್ ಕ್ಲಾಸ್. ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ನಟ,ನಿರ್ಮಾಪಕ ಜಗದೀಶ್ ಅವರದು.

ಚಿತ್ರದಲ್ಲಿ ಅವಿನಾಶ್,ರಮೇಶ್ ಭಟ್, ಪವನ್,ಸಂಗೀತ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ೭೮ ದಿನಗಳ ಕಾಲ ಬೆಂಗಳೂರು,ಕಾರವಾರ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ.

ಬಾಕ್ಸ್

ಗಿಮಿಕ್‌ಗಲ್ಲ
ಚಿತ್ರರಂಗದಲ್ಲಿ ಬದುಕು ಕಂಡುಕೊಳ್ಳಲು ಹಲವು ಮುಂದಾದರೆ ಮತ್ತೆ ಕೆಲವರು ಸಾಮಾಜಿಕ ಕಳಕಳಿ ಇಟ್ಟು ಸಿನಿಮಾ ಮಾಡುತ್ತಾರೆ ಆ ಸಾಲಿಗೆ ಥರ್ಡ್ ಕ್ಲಾಸ್ ಸಿನಿಮಾ ಕೂಡ ಸೇರ್ಪಡೆ.

ಉದ್ಯಮಿಯಾಗಿ ಎನ್‌ಜಿಒ ನಡೆಸುತ್ತಿರುವ ಜಗದೀಶ್.ಆಟೋ ಚಾಲಕರು ಹಾಗು ಕ್ಯಾಬ್ ಚಾಲಕರಿಗೆ ವಿಮೆ ಮಾಡಿಸಿದ್ದಾರೆ. ಅಲ್ಲದೆ ಅಂಧ ಮಕ್ಕಳಿಗೂ ಕೂಡ. ಅವರ ಶಿಕ್ಷಣಕ್ಕೆ ನೆರವಾಗಿದ್ದಾರೆ. ಇದು ಚಿತ್ರರಂಗದಲ್ಲಿ ಮೆಚ್ಚುಗೆಯ ಮಹಾಪೂರಕ್ಕೂ ಕಾರಣವಾಗಿದೆ.

ಈ ರೀತಿಯ ಕೆಲಸ ಚಿತ್ರದ ಪ್ರಚಾರದ ಗಿಮಿಕ್ ಅಲ್ಲ, ನಿಜವಾಗಿ ಸಾಮಾಜಿಕ ಕಳಕಳಿ ಮತ್ತು ಬದ್ದತೆಯಿಂದ ಮೊದಲಿನಿಂದ ಮಾಡಿಕೊಂಡು ಬಂದಿದ್ದೇನೆ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ನನ್ನಿಂದ ಹಲವರಿಗೆ ಸಹಾಯ ಆದರೆ ನನಗೆ ಅದೇ ಖುಷಿ ಮತ್ತು ತೃಪ್ತಿ ಅನ್ನುತ್ತಾರೆ ಜಗದೀಶ್.

Leave a Comment