ಅಪೌಷ್ಟಿಕತೆ ಮುಕ್ತ ರಾಜ್ಯಕ್ಕೆ ಆಗ್ರಹ

 

ಕಲಬುರಗಿ ಜ 21: ಅಪೌಷ್ಟಿಕತೆ ಮುಕ್ತ ರಾಜ್ಯ ಮತ್ತು ಅಂಗನವಾಡಿ ಸಬಲೀಕರಣಕ್ಕಾಗಿ ನ್ಯಾಮೂ. ಎನ್.ಕೆ ಪಾಟೀಲ ಸಮಿತಿಯ ಶಿಫಾರಸ್ಸುಗಳ ಪರಿಣಾಮಕಾರಿ ಜಾರಿಗೆ ಸಾಮಾಜಿಕ ಪರಿವರ್ತನಾ ಜನಾಂದೋಲನದ ಸಹ ಕಾರ್ಯದರ್ಶಿ ವಿಠಲ್ ಚಿಕಣಿ ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.    ಅಪೌಷ್ಟಿಕತೆ ನಿರ್ಮೂಲನೆ ಮತ್ತು ಅಪೌಷ್ಟಿಕತೆಗೆ ಸಂಬಂಧಿಸಿದಂತೆ ನ್ಯಾಮೂ ಎನ್ ಕೆ ಪಾಟೀಲ ಸಮಿತಿಯ ಶಿಫಾರಸ್ಸುಗಳನ್ನು ನಿರ್ಲಕ್ಷಿಸಿರುವ ಸರ್ಕಾರ,ಹೈಕೋರ್ಟಿನ ಸೂಚನೆ ಮೇರೆಗೆ ಇತ್ತೀಚಿಗೆ ಈ ಸಮಿತಿಯನ್ನು ಪುನಾರಚಿಸಿದ್ದು,ಈ ಹಿಂದೆ ಸದರಿ ಸಮಿತಿಯಲ್ಲಿದ್ದ ಸಾಮಾಜಿಕ ಸಂಘಸಂಸ್ಥೆಗಳ ಸದಸ್ಯರನ್ನು ಮತ್ತು ಪೌಷ್ಟಿಕ ತಜ್ಞರನ್ನು ಕೈ ಬಿಟ್ಟಿರುವದು ಖಂಡನೀಯ.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸ್ಥಾಪಿಸಿದ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರಗಳು ಅತಂತ್ರ ಸ್ಥಿತಿಯಲ್ಲಿದ್ದು ರೋಗಪೀಡಿತ ಕೇಂದ್ರಗಳಾಗಿವೆ ಎಂದು ದೂರಿದರು.ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರಗಳು ಮತ್ತು ಪರಿವರ್ತಿತ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರಗಳ ಬಲವರ್ಧನೆಗೆ ಆಗ್ರಹಿಸಿದ ಅವರು ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವದು ಎಂದರು.

ಸುದ್ದಿಗೋಷ್ಠಿಯಲ್ಲಿ ಆನಂದರಾಜ, ಬಸವರಾಜ ಟೆಂಗಳಿ,ಸಿಸ್ಟರ್ ರೀನಾ ಡಿಸೋಜಾ,ನರಸಿಂಹರಾವ ಸರಸ್ವತಿ, ಇಂದಿರಾ ಉಪಸ್ಥಿತರಿದ್ದರು..

Leave a Comment