ಅಪರಿಚಿತ ವ್ಯಕ್ತಿಯ ಶವ ಪತ್ತೆ : ಕೊಲೆ ಶಂಕೆ

ತಿಪಟೂರು, ಮೇ ೨೩- ನಗರದ ಬಿ.ಎಚ್.ರಸ್ತೆಯ ಮೋರ್ ಮುಂಭಾಗದ ಬಾಕ್ಸ್ ಚರಂಡಿಯೊಳಗೆ ಅಪರಿಚಿತ ಪುರುಷ ವ್ಯಕ್ತಿಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಳೆದ 2-3 ದಿನಗಳಿಂದಲೂ ಚರಂಡಿ ಒಳಗಿನಿಂದ ಕೆಟ್ಟ ವಾಸನೆ ಬರುತ್ತಿದ್ದನ್ನು ಗಮನಿಸಿದ ಅಂಗಡಿಗಳವರು ಕ್ರಿಮಿನಾಶಕವನ್ನು ಸಿಂಪಡಿಸಿದ್ದರು. ಆದರೆ ದಿನೇ ದಿನೇ ವಾಸನೆ ಹೆಚ್ಚಾದಂತೆ ಸಾರ್ವಜನಿಕರು, ಪೊಲೀಸರು ಹಾಗೂ ನಗರಸಭೆಯವರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿಯನ್ನಾಧರಿಸಿ ಸ್ಥಳಕ್ಕಾಗಮಿಸಿ, ಪರಿಶೀಲಿಸಿದಾಗ ಚರಂಡಿಯೊಳಗೆ ಮೃತದೇಹವಿರುವುದು ದೃಢಪಟ್ಟಿದೆ. ಆಗ ಅದನ್ನು ಹೊರತೆಗೆದಾಗ ಸದ್ಯ ಮೃತದೇಹ ಯಾರದ್ದು ಎಂದು ತಿಳಿದು ಬಂದಿಲ್ಲ.

ಸ್ಥಳದಲ್ಲಿ ಡಿವೈಎಸ್‍ಪಿ ಚಂದನ್‌ಕುಮಾರ್, ನಗರಠಾಣೆ ಸಬ್ಇನ್ಸ್‌ಪೆಕ್ಟರ್ ಸಿ.ಪಿ. ನವೀನ್, ನಗರಸಭೆ ಪೌರಾಯುಕ್ತ ಉಮಾಕಾಂತ್ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment