ಅಪರಿಚಿತ ವಾಹನ ಡಿಕ್ಕಿ: ಯುವಕರಿಬ್ಬರ ಸಾವು

 

ಕಲಬುರಗಿ ಸೆ 12: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಇಬ್ಬರು  ಯುವಕರು ಸ್ಥಳದಲ್ಲಿಯೇ ಸಾವಿಗೀಡಾದ ದಾರುಣ ಘಟನೆ ಕಲಬುರಗಿ ಹುಮನಾಬಾದ ಹೆದ್ದಾರಿ , ಮರಗುತ್ತಿ ಕ್ರಾಸ್ ಸಮೀಪ ನಿನ್ನೆ ತಡರಾತ್ರಿ ಸಂಭವಿಸಿದೆ

ಮೃತ ಯುವಕರನ್ನು ಹರೀಜಿ ನಾಯಕ ತಾಂಡಾದ ನಿವಾಸಿಗಳಾದ ಅವಿನಾಶ ಗೋಪಾಲ ರಾಠೋಡ (19) ಮತ್ತು ಹೀರಾಮನ್ ಭೀಮಸಿಂಗ್ ರಾಠೋಡ (18) ಎಂದು ಗುರುತಿಸಲಾಗಿದೆ. ರಾತ್ರಿ ನಡೆದ ಅಪಘಾತ ಘಟನೆ ಯಾರ ಗಮನಕ್ಕೂ ಬಂದಿಲ್ಲವಾದ್ದರಿಂದ ಇಂದು ಬೆಳಿಗ್ಗೆ ಮೃತ ಶರೀರಗಳನ್ನು ಗುರುತಿಸಲಾಗಿದೆ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Leave a Comment