ಅಪರಾಧ ನಿಯಂತ್ರಣ ಚಿಂತನೆ: 14ರಂದು

 

ಕಲಬುರಗಿ ಜು 12: ಅಪರಾಧ ನಿಯಂತ್ರಣ ಒಂದು ಚಿಂತನೆ ಕಾರ್ಯಕ್ರಮವನ್ನು ಗ್ಲೋಬಲ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ಜುಲೈ 14 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಅಜಾದಪುರ ರಸ್ತೆ ಹಬೀಬ್ ಫಂಕ್ಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಪರಾಧ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂಬ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಮುಖಂಡ ಸಜೀದ ಅಲಿ ರಂಜೋಳ್ವಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದು,ಖಾಜಾ ಬಂದೇನವಾಜ್ ದರ್ಗಾದ ಮುಖ್ಯಸ್ಥ ಸಜ್ಜಾದ ಡಾ. ಸೈಯದ್ ಷಾಹ ಖುಸ್ರೋ ಹುಸೈನಿ ಮತ್ತು ಶಹಾಬಜಾರ ಸುಲಫಲ ಮಠದ ಪೀಠಾಧಿಪತಿಗಳಾದ ಡಾ.ಮಹಾಂತ ಶಿವಾಚಾರ್ಯರು ವಹಿಸುವರು.ಮುಖ್ಯ ಅತಿಥಿಗಳಾಗಿ ಸಾದತ್ ಹುಸೈನ್ ಉಸ್ತಾದ,ಇಲಿಯಾಸ್ ಸೇಠ ಭಾಗವಾನ್,ಡಾ ಅಸ್ಗರ್ ಚುಲಬುಲ್,ಅತಿಥಿಗಳಾಗಿಮೌಲಾನಾ ಜಾವೇದ ಆಲಂಖಾಸ್ಮಿ,ಬಾಬಾ ನಜರ್ ಮಹ್ಮದ್ ಖಾನ್,ಮಹ್ಮದ್ ಎಜಾಜ್, ಲಿಂಗರಾಜ ಸಿರಗಾಪುರ,ವಾಹಜ್ ಬಾಬಾ,ಖಮರುಜಮಾ ಇನಾಂದಾರ, ಜಬ್ಬರ್ ಗೋಲ,ಮೌಲಾನಾ ನೂ ಭಾಗವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಸದ್ದಾಂ ವದರಾಸಿ,ಸೈಯದ್ ಕೌಫೀಕ್ ದೇಸಾಯಿ,ಮಕ್ಬುಲ್ ಅಹ್ಮದ್ ಸಗರಿ, ಬಾಬಾ ಫಕ್ರುದ್ದಿನ್ ,ಇಸ್ಮಾಯಿಲ್ ಬಾಬಾ ಉಪಸ್ಥಿತರಿದ್ದರು..

Leave a Comment