ಅಪಘಾತ: ಆರೋಪಿ ಬಂಧನ

ಧಾರವಾಡ ಮಾ.15- ನಗರದ ಸಂಜೀವಿನಿ ಪಾರ್ಕ ಬಳಿ ಬಿಆರ್‍ಟಿಎಸ್ ಪಥದಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ ವ್ಯಕ್ತಿಯ ಮೇಲೆ ಆಟೋ ಚಲಾಯಿಸಿ ಪರಾರಿಯಾಗಿದ್ದ ಆರೋಪಿಯನ್ನು ವಶಕ್ಕೆ ಪಡೆದ ಧಾರವಾಡ ಸಂಚಾರಿ ಪೋಲಿಸರು ತನಿಖೆ ನಡೆಸಿದ್ದಾರೆ.
ಉಣಕಲ್ ನಿವಾಸಿ ಮಲ್ಲೇಶಿ ಯಲ್ಲಪ್ಪ ನಾಯ್ಕರ ಬಂಧಿತ ಆರೋಪಿಯಾಗಿದ್ದಾನೆ. ಕಲ್ಲಪ್ಪ ಮಲ್ಲಿಕಾರ್ಜುನ ಮಡಿವಾಳರ ಎಂಬುವವನು ಕಾರಡಾರ ಹತ್ತಿರ ಬದ್ರತೆಗೆ ನೇಮಿಸಿದ್ದು ಆತ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ವೇಗವಾಗಿ ಆಟೋ ಓಡಿಸಿಕೊಂಡು ಡಿಕ್ಕಿ ಪಡಿಸಿ ಪರಾರಿಯಾಗಿದ್ದನು.
ಗಾರ್ಡ ಖಾಸಗಿ ಆಸ್ಪತ್ರೆಯಲ್ಲಿ ಸಾವು-ನೋವುಗಳ ಮಧ್ಯ ಹೋರಾಡುತ್ತಿದ್ದು ಪ್ರಕರಣದ ತನಿಖೆಯನ್ನು ಸಂಚಾರಿ ಪಿಐ ಮುರಗೇಶ ಚಣ್ಣನ್ನವರ ಕೈಗೊಂಡಿದ್ದಾರೆ.

Leave a Comment