ಅಪಘಾತಕ್ಕೆ ಏಷ್ಯಾಡ್ ಪದಕ ವಿಜೇತ ಕುಸ್ತಿಪಟು ಬಲಿ

ಪಾಲಿಯಾಲ, ಜ. ೧೨- ದೆಹಲಿ – ಹರಿಯಾಣ ಗಡಿ ಬೈಪಾಸ್ ಹೆದ್ದಾರಿಯಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಏಷಿಯನ್ ಗೇಮ್ಸ್ ಪದಕ ವಿಜೇತ ಕುಸ್ತಿಪಟು ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಸುಖ್ ಚೈನ್ ಸಿಂಗ್ ಚೀಮಾ (68) ಮೃತಪಟ್ಟಿದ್ದಾರೆ.

ಒಂದು ವಾರದಿಂದೀಚೆಗೆ ವಿಶ್ವ ಚಾಂಪಿಯನ್ ಸಕ್ಷಮ್ ಯಾದವ್ ಸೇರಿದಂತೆ ಐದು ಮಂದಿ ಕುಸ್ತಿಪಟುಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಸುಖ್ ಚೈನ್ ಸಿಂಗ್ ಚೀಮಾ ಅವರ ಕುಟುಂಬವೇ ಪಂಜಾಬ್‌ನ ಮೊದಲ ಕುಸ್ತಿಪಟುಗಳ ಕುಟುಂಬವಾಗಿದೆ.

ಪಾಟಿಯಾಲ ಬೈಪಾಸ್ ರಸ್ತೆಯಲ್ಲಿ ಟೊಯೊಟೊ ಇಟಿಯಾಸ್ ಕಾರಿನಲ್ಲಿ ಸುಖ್ ಚೈನ್ ಸಿಂಗ್ ಪ್ರಯಾಣಿಸುತ್ತಿದ್ದಾಗ ಆಲ್ಟೋ ಕಾರೊಂದು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಸಂಜೆ 7 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಸುಖ್ ಚೈನ್ ಅವರು ತಮ್ಮ ತೋಟದ ಮನೆಗೆ ತೆರಳುತ್ತಿದ್ದರು. ಆಲ್ಟೋ ಕಾರು ಡಿಕ್ಕಿ ಹೊಡೆದಾಗ ನಿಯಂತ್ರಣ ತಪ್ಪಿದ ಇವರ ಕಾರು ಉರುಳಿ ಪಕ್ಕದ ಗುಂಡಿಗೆ ಬಿದ್ದಿದೆ.

ಕಾರು ಸಂಪೂರ್ಣ ಜಖಂಗೊಂಡಿದ್ದರಿಂದ ಬಾಗಿಲುಗಳನ್ನು ತೆಗೆಯಲು ತೊಂದರೆಯಾಗಿ ಅದನ್ನು ಕತ್ತರಿಸಿ ತೆಗೆದು ಚೀಮಾ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚೀಮಾ ಮೃತರಾಗಿದ್ದಾರೆಂದು ವೈದ್ಯರು ತಿಳಿಸಿದರು.

Leave a Comment