ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಏಕೈಕ ನಿಜಶರಣ ಅಂಬಿಗ ಚೌಡಯ್ಯ

ಹರಿಹರ, ಸೆ. 12- ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಏಕೈಕ ನಿಜಶರಣ ಅಂಬಿಗ ಚೌಡಯ್ಯನವರು ಎಂದು ಗಂಗಾ ಮಾತಾಸ್ಥರ ಸಮಾಜದ ಅಧ್ಯಕ್ಷ ಪೇಟೆ ಬಸಪ್ಪ ಹೇಳಿದರು.
ತಾಲ್ಲೂಕಿನ ಗಂಗಾ ಮಾತಾಸ್ಥರ ಸಮಾಜದ ಅಭಿವೃದ್ಧಿಗೆ ಕ್ಷೇತ್ರದ ಶಾಸಕ ಎಸ್.ರಾಮಪ್ಪನವರಿಗೆ ಮನವಿ ಪತ್ರವನ್ನು ನೀಡಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಗೋವಿನ ಹಾಳು ಮೆಲೆಬೆನ್ನೂರು ಗುತ್ತೂರು ಮತ್ತು ಇನ್ನಿತರ ಗ್ರಾಮಗಳಲ್ಲಿ ಸಮುದಾಯ ಭವನ ದೇವಸ್ಥಾನಗಳ ಸುತ್ತಲೂ ತಡೆಗೋಡೆ ನಿರ್ಮಾಣ ಮತ್ತು ಗಂಗಾ ಮಾತಸ್ಥರ ಸಮಾಜದ ಶಿಕ್ಷಣ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಮನವಿಯನ್ನು ಮಾಡಿದ್ದೇವೆ. ಮನವಿಗೆ ಸ್ಪಂಧಿಸಿ ಗಂಗಾ ಮಾತಾಸ್ಥರ ಸಮಾಜದ ಅಭಿವೃದ್ಧಿಗೆ ನನ್ನ ಅನುದಾನದಲ್ಲಿ ನೀಡಿ ಶಿಕ್ಷಣ ದೇವಸ್ಥಾನದ ಜೀರ್ಣೋದ್ಧಾರ ಉದ್ಯಾನವನ ನಿವೇಶನಗಳು ಇನ್ನಿತರೆ ಸರ್ಕಾರದ ಸವಲತ್ತುಗಳನ್ನು ಒದಗಿಸಿಕೊಡುತ್ತೇನೆಂದು ಭರವಸೆ ನೀಡಿದರು ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಮಾಗಾನಗಳ್ಳಿ ಹಾಲಪ್ಪ ಮಾತನಾಡಿ ಸಮಾಜದಲ್ಲಿ ಕೀಳರಿಮೆ ತ್ಯಜಿಸಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ನಮ್ಮ ಸಮಾಜ ಉತ್ತಮ ನಾಗರೀಕ ಸಮಾಜ ಕಟ್ಟುವುದಕ್ಕೆ ಮುಂದಾಗಬೇಕು ರಾಜಕೀಯ ಶೈಕ್ಷಣ ಕವಾಗಿ ಮುಂದಾಗಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ದೊರಕಿಸುವ ಮೂಲಕ ಸಮಾಜವನ್ನು ಮುಖ್ಯ ವಾಹಿನಿಗೆ ಬರಲು ಸಮಾಜದ ಎಲ್ಲಾ ಹಿರಿಯ ಕಿರಿಯರು ಶ್ರಮಿಸಬೇಕು. ಸಮಾಜದಲ್ಲಿರುವ ಧ್ವೇಷ ಅಸೂಯೆ ಕಿತ್ತಾಕಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದಕ್ಕೆ ಸಮಜದವರು ಕೈಜೋಡಿಸಿ ಅಭಿವೃದ್ಧಿ ಪಡಿಸುವುದಕ್ಕೆ ಮುಂದಾಗಬೇಕು ನಿಜಶರಣ ಅಂಬಿಗ ಚೌಡಯ್ಯನವರ ಚಿಂತನೆ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಅವರ ಆದರ್ಶದಲ್ಲಿ ನಡೆಯೋಣ ಎಂದು ಹೇಳಿದರು.

Leave a Comment