ಅನ್ಯರು ನೀಡಿದ ಪಟಾಕಿ ಹಚ್ಚಿ : ದೃಷ್ಠಿಹೀನನಾದ ಬಾಲಕ

ಬೆಂಗಳೂರು,ನ.೭-ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ಸಿಡಿಸಿರುವ ಪಟಾಕಿಯ ಕಿಡಿ ತಗುಲಿ ಬಾಲಕನೊಬ್ಬನ ಕಣ್ಣಿಗೆ ಗಂಭೀರ ಹಾನಿಯಾಗಿ ಕತ್ತಲೆ ಆವರಿಸಿದ್ದರೆ ಸುಮಾರು ೨೫ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಪಟಾಕಿ ಸಿಡಿತದಿಂದ ಗಾಯಗೊಂಡಿರುವವ ಸಂಖ್ಯೆ ೫೦ಕ್ಕೇರಿದೆ.

ದೇವನಹಳ್ಳಿಯ ಜೋಗಿಹಳ್ಳಿಗೆ ಕೂಲಿ ಅರಸಿ ಬಂದಿದ್ದ ಗುಲ್ಬರ್ಗ ಮೂಲದ ಆಯಲಮ್ಮ ಅವರ ಪುತ್ರರಾದ ಮೌನೇಶ್ ಹಾಗು ವಸುನಾಥ್ ನಿನ್ನೆ ರಾತ್ರಿ ಬೇರೆಯವರು ಕೊಟ್ಟಿದ್ದ ಪಟಾಕಿ ಸಿಡಿಸಲು ಹೋಗಿ ಮೌನೇಶ್ ಕಣ್ಣಿಗೆ ಗಂಭೀರ ಹಾನಿಯಾದರೆ ವಸುನಾಥ್ ಕೈ ಸುಟ್ಟುಕೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

8a2

ಕಣ್ಣಿಗೆ ಹಾನಿ ಮಾಡಿಕೊಂಡಿರುವ ಮೌನೇಶ್‌ಗೆ ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಆತನಿಗೆ ದೃಷ್ಠಿ ಬರುವುದು ಅನುಮಾನವಾಗಿದೆ ಅಂತೆಯೇ ಬೇರೆಯವರು ಸಿಡಿಸಿದ ಪಟಾಕಿಯನ್ನು ನೋಡುತ್ತಿದ್ದ ಬನಶಂಕರಿಯ ಅಭಿಷೇಕ್ ರಜಪೂತ್ ಅವರು ಪಟಾಕಿ ಕಿಡಿ ಕಣ್ಣಿಗೆ ಹಾನಿ ಮಾಡಿಕೊಂಡು ಉಂಟಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗಿದೆ.

ಪಟಾಕಿ ಸಿಡಿಸುತ್ತಿದ್ದ ರಾಜ್‌ಕಲ್ಯಾಣ್ ಎಂಬ ಯುವಕನ ಕಣ್ಣಿಗೆ ಪಟಾಕಿ ಸಿಡಿತದಿಂದ ಗಾಯವಾಗಿದ್ದು ಆತನಿಗೆ ಚಿಕಿತ್ಸೆ ನೀಡಲಾಗಿದೆ ನಿನ್ನೆ ರಾತ್ರಿಯಿಂದ ಮಿಂಟೋ ಆಸ್ಪತ್ರೆಗೆ ೯ ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ ಗಾಯವಾದವರಲ್ಲಿ ಕಾಟನ್‌ಪೇಟೆಯ ರಾಯಲ್ ರಸ್ತೆಯ ಲಕ್ಷ್ಮಿ ಎಂಬುವರ ಪುತ್ರಿ ೩ ವರ್ಷದ ಯಶಸ್ವಿನಿ ಪಟಾಕಿ ಸಿಡಿಸಿದ ಕಿಡಿ ಕಣ್ಣಿನ ಕೆಳಭಾಗಕ್ಕೆ ತಗುಲಿ ಗಾಯಗೊಂಡಿದ್ದಾಳೆ.ಇನ್ನೂ ಪಟಾಕಿ ಸಿಡಿತದಿಂದ ಮೈಕೈಗೆ ಗಾಯ ಮಾಡಿಕೊಂಡಿರುವ ೨೦ಕ್ಕೂ ಹೆಚ್ಚು ಮಂದಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಹಬ್ಬದ ಖಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ನಿನ್ನೆ ೨೫ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ೯ ಮಂದಿ ಹಾಗೂ ನಾರಾಯಣ ನೇತ್ರಾಲಯದಲ್ಲಿ ಐವರು ಶೇಖರ್ ನೇತ್ರಾಲಯದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದಾರೆ.ನಿನ್ನೆ ಸುಮಾರು ೨೦ ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದರು.

Leave a Comment