ಅನ್ಯಮತೀಯ ಜೋಡಿ ಪತ್ತೆ

ಪ್ರಕರಣ ವರ್ಗಾಯಿಸಿ ಕೈತೊಳೆದುಕೊಂಡ ಪೊಲೀಸರು!

ಪುತ್ತೂರು, ಜು.೧೭- ಕೇರಳ ರಾಜ್ಯದ ಅನ್ಯಮತೀಯ ಜೋಡಿಯೊಂದು ಪುತ್ತೂರು ತಾಲೂಕಿನ ಗಡಿಪ್ರದೇಶವಾದ ಈಶ್ವರಮಂಗಲ ಸಮೀಪ ನಿನ್ನೆ ಸಂಜೆ ಪೊಲೀಸರ ವಶವಾದ ಘಟನೆ ನಡೆದಿದೆ. ಬೈಕೊಂದರಲ್ಲಿ ಬಂದು ಈಶ್ವರಮಂಗಲದ ಗುಡ್ಡ ಪ್ರದೇಶದಲ್ಲಿ ಚಕ್ಕಂದವಾಡುತ್ತಿದ್ದ ಜೋಡಿಯ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಂಪ್ಯ ಗ್ರಾಮಾಂತರ ಠಾಣೆಯ ಪೊಲೀಸರು ಜೋಡಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಮುಜೀದ್(೧೮) ಹಾಗೂ ೧೦ನೇ ತರಗತಿ ವಿದ್ಯಾರ್ಥಿನಿಯ ವಿಚಾರಣೆ ನಡೆಸಿದ ಪೊಲೀಸರು ಜೋಡಿ ಕೇರಳ ಮೂಲದವರು ಎಂದು ಆದೂರುಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಿ ಕೈತೊಳೆದುಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆದೂರು ಠಾಣೆಯ ಮುಂಭಾಗದಲ್ಲಿ ಸಂಜೆಯವರೆಗೆ ಪ್ರತಿಭಟನೆ ನಡೆಸಿದ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರು ಮುಜೀದ್ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಡ ಹಾಕಿದ್ದಾರೆ. ಪ್ರತಿಭಟನೆಗೆ ಮಣಿದ ಪೊಲೀಸರು ಮುಜೀದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.

Leave a Comment