ಅನ್ಯಗ್ರಹ ಶೋಧಕ್ಕೆ ಟೆಸ್ ಉಪಗ್ರಹ

ಸೌರಮಂಡಲದ ಆಚೆಗಿನ ಅನ್ಯಗ್ರಹಗಳ ಶೋಧನೆಗಾಗಿ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾನಾ ಮಾರ್ಚ್ ೨೦ ರಂದು ದಿ ಟ್ರಾನ್ಸ್‌ಮಿಟಿಂಗ್ ಎಕ್ಸೊ ಪ್ಲಾನೆಟ್ ಸರ್ವೆ ಸ್ಯಾಟಲೈಟ್ (ಟೆಸ್) ಉಪಗ್ರಹವನ್ನು ಉಡಾವಣೆ ಮಾಡುತ್ತಿವೆ.

ಈವರೆಗೆ ಅನ್ಯಗ್ರಹ ಶೋಧನೆಯವಲ್ಲಿ ಕೆಪ್ಲರ್ ಟೆಲಿಸ್ಕೋಪ್ ತೊಡಗಿದ್ದು ಆ ಕಾರ್ಯವನ್ನು ಇನ್ನಷ್ಟು ಕಾರರುವಕ್ಕಾಗಿ ಮುಂದೆ ಟೆಸ್ ಟೆಲಿಸ್ಕೋಪ್ ಮಾಡಲಿದೆ
ಇವರ ಉಡಾವಣೆಯನ್ನು ಅಮೆರಿಕದ ಸ್ಪೇಸ್ ಎಕ್ಸ್ ಖಾಸಗಿ ಬಾಹ್ಯಾಕಾಶ ಸಂಸ್ಥೆ ನಿರ್ವಹಿಸುತ್ತಿದ್ದು, ಅದು ತನ್ನ ಫಾಲ್ಕನ್-೯ ರಾಕೆಟ್ ಮೂಲಕ ಉಡಾವಣೆ ಮಾಡಲಿದೆ.
ಅತ್ಯಾಧುನಿಕ ನಾಲ್ಕ ಟೆಲಿಸ್ಕೋಪ್‌ಗಳನ್ನು ಹೊಂದಿರುವ ಈ ಉಪಗ್ರಹದ ಅಭಿವೃದ್ಧಿಯನ್ನು ಮೆಸಾಚುಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಮಾಡಿದೆ.
ಎರಡು ವರ್ಷಗಳ ಕಾಲ ಅನ್ಯಗ್ರಹಗಳ ಶೋಧನಾ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವ ಈ ಉಪಗ್ರಹ, ಟ್ರಾನ್ಸಿಸ್ಟ್ ಮಾದರಿಯಲ್ಲಿ ಗ್ರಹ, ನಕ್ಷತ್ರಗಳ ವೀಕ್ಷಣೆ ನಡೆಸುತ್ತದೆ. ಅಂದರೆ ಭೂಮಿಯಿಂದ ಗಮನಿಸಿದಾಗ ನಕ್ಷತ್ರದ ಮುಂದೆ ಗ್ರಹಗಳು ಹಾದು ಹೋಗುವ ಅವಧಿಯನ್ನು ಟ್ರಾನ್ಸಿಸ್ಟ್ ಎನ್ನುತ್ತೇವೆ. ಉದಾಹರಣೆಗೆ ಸೂರ್ಯ ಮತ್ತು ಭೂಮಿ ನಡುವೆ ಗುರುಗ್ರಹ ಹಾದು ಹೋಗುವ ಅವಧಿಯಲ್ಲಿ ಸೂರ್ಯನ ಮೇಲೆ ಆ ಗ್ರಹ ಸಣ್ಣ ನೆರಳು ಬೀಳುತ್ತದೆ.
ಹಾಗೆಯೇ ಸೌರಮಂಡಲಾಚೆಗಿನ ನಕ್ಷತ್ರ ಮಂಡಲಗಳಲ್ಲಿಯ ವಿವಿಧ ಗ್ರಹಗಳು ಆಯಾ ನಕ್ಷತ್ರಗಳ ಸುತ್ತ ಸುತ್ತುವಾಗ, ಆ ಗ್ರಹಗಳ ನೆರಳು, ಆಯಾ ನಕ್ಷತ್ರಗಳ ಮೇಲೆ ಬೀಳುತ್ತದೆ. ಆಗ ನಕ್ಷತ್ರದ ಬೆಳಕು ತುಸು ಮಸಕಾಗುತ್ತದೆ. ಈ ಮಸುಕಾಗುವ ಅವಧಿಯನ್ನು ಆಧರಿಸಿ ಆ ಗ್ರಹಗಳ ಸುತ್ತುವಿಕೆಯ ಮಾಹಿತಿಯನ್ನು ಪಡೆಯಲು ಇದು ಸಾಧ್ಯವಾಗುತ್ತವೆ.
ಈ ಆಧಾರದಲ್ಲಿ ಅತಿ ಬೆಳಕಿನ ನಕ್ಷತ್ರಗಳ ಸುತ್ತ ಸುತ್ತುತ್ತಿರುವ ಸೌರಮಂಡಲದಾಚೆಗಿನ ಗ್ರಹಗಳ ಮೇಲೆ ಈ ಉಪಗ್ರಹದ ಕ್ಯಾಮರಾಗಳು ನಿಗಾವಹಿಸುತ್ತವೆ.
ಭೂಮಿಯಿಂದ ೧೦೮,೦೦೦ ಮತ್ತು ೩೭೩,೦೦೦ ಕಿ.ಮೀ. ಎತ್ತರದಲ್ಲಿಯ ಕಕ್ಷೆಯಲ್ಲಿ ಎರಡು ವರ್ಷಗಳ ಕಾಲ ಶೋಧನಾ ಕಾರ್ಯ ನಡೆಸುವ ಈ ಉಪಗ್ರಹ ಸುಮಾರು ೫೦೦,೦೦೦ ನಕ್ಷತ್ರಗಳ ಬೆಳಕಿನ ಏರಿಳಿತಗಳ ಕುರಿತಂತೆ ಮಾಹಿತಿ ಸಂಗ್ರಹಿಸಲಿರುವ ಇದೇ ವೇಳೆ ಭೂಮಿ ಗಾತ್ರದ ೫೦ಕ್ಕೂ ಹೆಚ್ಚು ಗ್ರಹಗಳ ಜೊತೆ ಸಾವಿರಾರು ಗ್ರಹಗಳ ಶೋಧನೆ ಮಾಡಲಿದೆ ಎಂದು ನಾಸಾದ ವಕ್ತಾರ ಫೆಲಿಸಿಯಾ ಚೌ ಹೇಳಿದ್ದಾರೆ.
ಈ ಉಪಗ್ರಹದ ವಿಶೇಷವೆಂದರೆ ಇದರಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ನಾಲ್ಕು ಅತ್ಯಾಧುನಿಕ ಕ್ಯಾಮರಾಗಳು ಇದ್ದು, ಇವು ನಕ್ಷತ್ರ ಪುಂಜಗಳ ಸೀಮಿತ ಪ್ರದೇಶದ ಮೇಲೆ ತೀವ್ರ ನಿಗಾ ವಹಿಸುವುದರಿಂದ ಅವುಗಳ ಕುರಿತ ಅಧ್ಯಯನ ಸುಲಭವಾಗುತ್ತದೆ.
ಈವರೆಗೆ ಬಾಹ್ಯಾಕಾಶದಲ್ಲಿ ಅನ್ಯಗ್ರಹಗಳ ಶೋಧನೆಯಲ್ಲಿ ತೊಡಗಿರುವ ಕೆಪ್ಲರ್ ಲೆಕ್ಕವಿಲ್ಲದಷ್ಟು ಹೊಸಗ್ರಹಗಳ,  ನಕ್ಷತ್ರ ಮಂಡಲಗಳನ್ನು ಶೋಧಿಸಿದೆ. ನಾಸಾದ ಜೊತೆಗೆ ವಿಶ್ವದ ಪ್ರಮುಖ ಬಾಹ್ಯಾಕಾಶ ಶೋಧನಾ ಸಂಸ್ಥೆಗಳು ಅನ್ಯಗ್ರಹಗಳ ಶೋಧನೆಯಲ್ಲಿ ತೊಡಗಿವೆ.
ಹೊಸ ಗ್ರಹ, ನಕ್ಷತ್ರಗಳ ಶೋಧನೆಯಿಂದ ಸೌರಮಂಡಲಗಳು, ನಕ್ಷತ್ರ ಮಂಡಲಗಳು ಅವುಗಳ ಚಲನೆ, ಅವುಗಳ ಹೊಂದಿರುವ ಗುರುತ್ವಾಕರ್ಷಣೆ ಕುರಿತಂತೆ ಹೆಚ್ಚಿನ ಮಾಹಿತಿ ಪಡೆಯುವುದರ ಜೊತೆಗೆ ಒಟ್ಟು ಬ್ರಹ್ಮಾಂಡದ ಸೃಷ್ಟಿಯ ಕುರಿತ ಅಧ್ಯಯನಕ್ಕೂ ಇದು ಪೂರಕವಾಗುತ್ತದೆ ಎಂಬುದು ವಿಜ್ಞಾನಿಗಳ ನಿರೀಕ್ಷೆ.

Leave a Comment