ಅನ್ಯಗ್ರಹ ಜೀವಿಗಳ ಹುಡುಕಾಟದಲ್ಲಿ ಮೀರ್‌ಕಾಟ್ ಟೆಲಿಸ್ಕೋಪ್

ಉತ್ತನೂರು ವೆಂಕಟೇಶ್

ಅನ್ಯಗ್ರಹಗಳಲ್ಲಿಯ ಅತೀಂಧ್ರೀಯ ಜೀವಿಗಳ ಶೋಧನಾ ಕಾರ್ಯದಲ್ಲಿ ದಕ್ಷಿಣ ಧೃವದಲ್ಲಿ ಸ್ಥಾಪಿಸಿರುವ ಮೀರ್‌ಕಾಟ್ ರೇಡಿಯೋ ಟೆಲಿಸ್ಕೋಪ್ ಕೂಡ ಈಗ ಭಾಗಿಯಾಗಿದೆ. ಅನ್ಯಗ್ರಹ ಜೀವಿಗಳ ಹುಡುಕಾಟದಲ್ಲಿ ತೊಡಗಿರುವ ವಿಶ್ವದ ಅತಿ ದೊಡ್ಡ ಯೋಜನೆಯಾದ ‘ಬ್ರೇಕ್ ಥ್ರೂ ಲಿಸನ್ನ ಭಾಗವಾಗಿ ಮೀರ್‌ಕಾಟ್ ಕಾರ್ಯನಿರ್ವಹಿಸುತ್ತದೆ.

ಅನ್ಯಗ್ರಹಗಳಲ್ಲಿ ಅಥೀಂದ್ರಿಯ ಮಾನವರಿದ್ದಾರೆ. ಅವರು ನಮಗಿಂತ ಬುದ್ಧಿವಂತರು ಮತ್ತು ಶಕ್ತಿವಂತರು ಎಂದು ನಂಬಿರುವ ವಿಜ್ಞಾನಿಗಳು ಅವುಗಳ ಶೋಧನೆಯಲ್ಲಿ ತೊಡಗಿದ್ದಾರೆ.
ಇಂತಹ ಶೋಧನಾ ಕಾರ್ಯದಲ್ಲಿ ‘ಬ್ರೇಕ್ ಥ್ರೂ ಲಿಸನ್ ಕಾರ್ಯಯೋಜನೆ ಮಹತ್ವದ್ದಾಗಿದೆ.

ಈಗ ದಕ್ಷಿಣ ಧೃವದಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡ ರೇಡಿಯೋ ಟೆಲಿಸ್ಕೋಪ್ ‘ಮೀರ್ ಕಾಟ್ ಕೂಡ ಬ್ರೇಕ್ ಥ್ರೂ ನೊಂದಿಗೆ ಕೈಜೋಡಿಸಿದೆ.

ಅನ್ಯಗ್ರಹ ಜೀವಿಗಳಿಂದ ಬಂದಿದೆ ಎನ್ನಲಾದ ರೇಡಿಯೋ ಸಂಕೇತಗಳು ಬ್ರೇಕ್ ಥ್ರೂ ಲಿಸನ್‌ನ ಆಂಟೆನಾದಲ್ಲಿ ದಾಖಲಾಗಿರುವುದು ಅನ್ಯ ಜೀವಿಗಳ ಹುಡುಕಾಟಕ್ಕೆ ಉತ್ಸಾಹ ತುಂಬಿದೆ.

ಈಗಾಗಲೇ ಭೂಮಿಯಿಂದಲೂ ಅನ್ಯಗ್ರಹ ಜೀವಿಗಳಿಗೆ ರೇಡಿಯೋ ಸಂಕೇತಗಳನ್ನು ರವಾನಿಸಲಾಗಿದೆ.

7vichara2

‘ಬ್ರೇಕ್ ಥ್ರೂ ಲಿಸನ್ ೧೦೦ ದಶಲಕ್ಷ ಡಾಲಱ್ಸ್ ಮೊತ್ತದ ಅನ್ಯಗ್ರಹ ಜೀವಿಗಳ ಶೋಧನಾ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ದಕ್ಷಿಣ ಆಫ್ರಿಕಾದ ರೇಡಿಯೋ ಅಸ್ಟ್ರಾನಮಿ ಅಬ್ಸರ್‌ವೇಟರಿ (ಸಾರಾವ್)ನ ಸಹಯೋಗಪಡೆದಿದೆ.

ಈಗ ಇವರೊಂದಿಗೆ ಮೀರ್‌ಕಾಟ್ ರೇಡಿಯೋ ಟೆಲಿಸ್ಕೋಪ್ ಕೂಡ ಕೈ ಜೋಡಿಸಿದ್ದು, ಅನ್ಯಗ್ರಹ ಜೀವಿಗಳ ಶೋಧನೆಗೆ ಹೆಚ್ಚಿನ ಬಲ ಬಂದಂತಾಗಿದೆ.

ಈ ಮೂರು ವ್ಯವಸ್ಥೆಗಳು ಒಟ್ಟಾಗಿ ದಿನದ ೨೪ ಗಂಟೆಗಳೂ ಲಕ್ಷಾಂತರ ನಕ್ಷತ್ರಗಳ ಚಲನ-ವಲನಗಳ ಮೇಲೆ ನಿಗಾ ಇಡಲು ಸಾಧ್ಯವಾಗಿದೆ ಎಂದು ‘ಬ್ರೇಕ್ ಥ್ರೂ ಲಿಸನ್ ಸ್ಥಾಪಕ ಯೂರಿ ಮಿಲ್ನರ್ ಹೇಳಿದ್ದಾರೆ. ಮಿರ್‌ಕಾಟ್‌ನೊಂದಿಗಿನ ಸಹಯೋಗ ಬ್ರೇಕ್ ಥ್ರೂ ಲಿಸನ್ ಯೋಜನೆ ಸಾಮರ್ಥ್ಯ ಹೆಚ್ಚಿಸಿದೆ.

ಈ ಶೋಧನಾ ಕಾರ್ಯಕ್ಕೆ ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಲಾಗುವುದು ಎಂದು ಬ್ರೇಕ್ ಥ್ರೂ ಲಿಸನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಪೆಟವಾರ್ಡನ್ ಹೇಳಿದ್ದಾರೆ.

ಸೌರಮಂಡಲದಾಚೆಯ ಗ್ರಹಗಳಲ್ಲಿ ಅಥೀಂದ್ರಿಯ ಜೀವಿಗಳು ಇವೆ. ಅವು ನಮಗಿಂತ ಬುದ್ಧಿವಂತರು ಹಾಗೂ ಶಕ್ತಿವಂತರು ಎಂಬ ಬಲವಾದ ನಂಬಿಕೆ ವಿಜ್ಞಾನಿಗಳಲ್ಲಿ ಹಿಂದಿನಿಂದಲೂ ಇದೆ.

7vichara1

ಇದೇ ವೇಳೆ ಇತ್ತೀಚೆಗೆ ಪತ್ತೆಹಚ್ಚಲಾಗಿರುವ ಸೌರಮಂಡಲದ ಆಚೆಗಿನ ೩ ಹೊಸ ಗ್ರಹಗಳಲ್ಲಿ ಅನ್ಯಲೋಕದ ಜೀವಿಗಳು ಇರುವ ಸಾಧ್ಯತೆ ದಟ್ಟವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಅನ್ಯ ಜೀವಿಗಳ ಹುಡುಕಾಟದಲ್ಲಿರುವ ವಿಜ್ಞಾನಿಗಳಿಗೆ ತಮ್ಮ ಶೋಧನಾ ಕಾರ್ಯದಲ್ಲಿ ಹೆಚ್ಚಿನ ಹುರುಪು, ಉತ್ಸಾಹ ಮೂಡಿಸಿದ್ದು, ಬ್ರೇಕ್ ಥ್ರೂ ಲಿಸನ್ಪ್ರಾಜೆಕ್ಟ್ ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ಬೃಹತ್ ಆಂಟೇನಾದಲ್ಲಿ ಈ ಹಿಂದೆ ಅನ್ಯಗ್ರಹದಿಂದ ಬಂದಿರುವ ರೇಡಿಯೋ ಸಂಕೇತಗಳು ದಾಖಲಾಗಿರುವುದು.

ಕಳೆದ ವರ್ಷ ಅನ್ಯಗ್ರಹಗಳಿಂದ ಬಂದವು ಎನ್ನಲಾದ ೧೫ ನಿಗೂಢ ರೇಡಿಯೋ ಸಂಕೇತಗಳನ್ನು ಆಂಟೇನಾದಲ್ಲಿ ದಾಖಲಾಗಿವೆ. ಇದರ ಬೆನ್ನಲ್ಲೆ ಅನ್ಯಲೋಕದ ಜೀವಿಗಳಿಗೂ ಭೂಮಿಯಿಂದ ರೇಡಿಯೋ ಸಂಕೇತಗಳನ್ನು ಕಳುಹಿಸುವ ಯತ್ನವೂ ನಡೆದಿದೆ.

ಜಿ.ಜೆ.ಬಿ ಹೆಸರಿನಲ್ಲಿ ಗ್ರಹಕ್ಕೆ ನಾರ್ವೆ ದೇಶದಲ್ಲಿರುವ ಖಗೋಳ ವೀಕ್ಷಣಾಲಯದ ಆಂಟೇನಾ ಮೂಲಕ ಕಳೆದ ಅಕ್ಟೋಬರ್ ತಿಂಗಳಲ್ಲಿ ರೇಡಿಯೋ ಸಂಕೇತಗಳ ಮೂಲಕ ಸಂದೇಶವನ್ನು ರವಾನಿಸಲಾಗಿದೆ. ರವಾನಿಸಿರುವ ಈ ಸಂದೇಶಕ್ಕೆ ಅಲ್ಲಿಂದ ಮರು ಸಂದೇಶ ಬರಲು ೨೫ ವರ್ಷಗಳು ಹಿಡಿಯುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Leave a Comment